Breaking News

ಉಪ್ಪಿನಂಗಡಿ ಮೊಬೈಲ್ ಸ್ಫೋಟ ಯುವಕನಿಗೆ ಗಾಯ


ಉಪ್ಪಿನಂಗಡಿ : ಮೊಬೈಲ್‌ನಲ್ಲಿ ಮಾತನಾಡುತ್ತಿದ್ದ ವೇಳೆ ಏಕಾಏಕಿ ಫೋನ್ ಸ್ಫೋಟಗೊಂಡು ಯುವಕನೊಬ್ಬ ಗಂಭೀರ ಗಾಯಗೊಂಡ ಘಟನೆ ಉಪ್ಪಿನಂಗಡಿಯಲ್ಲಿ ಇಂದು ಬೆಳಗ್ಗೆ ನಡೆದಿದೆ.
ಘಟನೆಯಲ್ಲಿ ಗಂಭೀರ ಗಾಯಗೊಂಡ ಯುವಕನನ್ನು ಸಂದೇಶ್ ಎಂದು ಗುರುತಿಸಲಾಗಿದ್ದು, ಇವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಂದು ಬೆಳಗ್ಗೆ ಮೊಬೈಲ್ ಜಾರ್ಜ್‌ಗೆ ಇಟ್ಟು ಪೂರ್ಣ ಪ್ರಮಾಣದಲ್ಲಿ ಚಾರ್ಜ್ ಆದ ನಂತರ ಪಿನ್ ಅನ್‌ಪ್ಲಗ್ ಮಾಡಿದ್ದರು. ನಂತರ ಫೋನ್‌ನಲ್ಲಿ ಕರೆ ಮಾಡುತ್ತಿದ್ದ ವೇಳೆ ಫೋನ್ ಏಕಾಏಕಿ ಸ್ಫೋಟಗೊಂಡಿದೆ. ಘಟನೆಯಲ್ಲಿ ಸಂದೇಶ್ ಅವರ ಕಿವಿ ಹಾಗೂ ಕೆನ್ನೆಯ ಭಾಗಕ್ಕೆ ಗಂಭೀರ ಗಾಯಗೊಂಡಿದೆ ಎನ್ನಲಾಗಿದೆ.

loading...

No comments