Breaking News

ಆಸ್ಟ್ರೇಲಿಯಾದಲ್ಲಿ ಭಾರತದ ಪಾದ್ರಿಗೆ ಚೂರಿ ಇರಿತಆಸ್ಟ್ರೇಲಿಯಾದಲ್ಲೂ ಭಾರತೀಯರ ವಿರುದ್ಧ ಜನಾಂಗೀಯ ದ್ವೇಷ ಹೊಗೆಯಾಡುತ್ತಿದೆ. ಭಾರತೀಯ ಮೂಲದ ಕ್ಯಾಥೋಲಿಕ್ ಪಾದ್ರಿಯೊಬ್ಬರ ಕುತ್ತಿಗೆಗೆ ದುಷ್ಕರ್ಮಿಯೊಬ್ಬ ಇರಿದು ತೀವ್ರವಾಗಿ ಗಾಯಗೊಳಿಸಿರುವ ಘಟನೆ ಮೆಲ್ಬೊರ್ನ್ ಚರ್ಚ್‍ನಲ್ಲಿ ನಡೆದಿದೆ.  

ಭಾರತೀಯನಾದ ನೀನು ಸಾಮೂಹಿಕ ಪ್ರಾರ್ಥನೆ ನಡೆಸಲು ಮತ್ತು ಧರ್ಮೋಪದೇಶ ಮಾಡಲು ಅನರ್ಹ ಎಂದು ದುಷ್ಕರ್ಮಿ ಅಬ್ಬರಿಸಿ ಇರಿದು ಕೊಲೆಗೆ ಯತ್ನಿಸಿದ್ದಾನೆ. ಅಮೆರಿಕದಲ್ಲಿ ಹೈದರಾಬಾದ್ ಟೆಕ್ಕಿ ಶ್ರೀನಿವಾಸ ಕೂಚಿಭೊಟ್ಲಾ ಮತ್ತು ಹರ್ಷಿತ್ ಪಟೇಲ್ ಹತ್ಯೆ ಹಾಗೂ ನ್ಯೂಜಿಲೆಂಡ್‍ನಲ್ಲಿ ಸಿಖ್ ಮೂಲಕ ವ್ಯಕ್ತಿಗಳ ಮೇಲೆ ನಡೆದ ಹಲ್ಲೆ ಘಟನೆಗಳಿಂದ ಭಾರತೀಯರು ಆತಂಕಗೊಂಡಿರುವಾಗಲೇ ಆಸ್ಟ್ರೇಲಿಯಾದಲ್ಲೂ ಇಂಥ ಘಟನೆ ಮರುಕಳಿಸಿದೆ.

loading...

No comments