Breaking News

ಸಿಎಂ ಆದ ಮೇಲೆ ಯೋಗಿ ಕೊಟ್ಟ ಖಡಕ್ ಸೂಚನೆ ಏನು ಗೊತ್ತೇ


ಉತ್ತರಪ್ರದೇಶ : ನೂತನ ಮುಖ್ಯಮಂತ್ರಿ ಸ್ಥಾನ ಅಲಂಕರಿಸಿದ ಕೂಡಲೇ ಸಚಿವರಿಗೆ ಖಡಕ್‌ ಸಂದೇಶ ರವಾನಿಸಿರುವ ಯೋಗಿ ಆದಿತ್ಯನಾಥ್‌, ಮುಂದಿನ 15 ದಿನಗಳಲ್ಲಿ ತಮ್ಮ ಆಸ್ತಿ ವಿವರ ನೀಡುವಂತೆ ಅಲ್ಲಿನ ಸಚಿವರಿಗೆ ತಿಳಿಸಿದ್ದಾರೆ.

ಉತ್ತರಪ್ರದೇಶ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಿದ ನಂತರ ಮೊದಲ ಬಾರಿಗೆ ಸುದ್ದಿಗೋಷ್ಠಿ ನಡೆಸಿದ ಅವರು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಆದ್ಯತೆ ನೀಡುವುದರ ಜತೆಗೆ ಮಹಿಳೆಯರ ರಕ್ಷಣೆಗೆ ಮೊದಲ ಆದ್ಯತೆ ನೀಡಲಾಗುವುದು ಎಂದರು.

'ನಮ್ಮ ಮುಖ್ಯ ಉದ್ದೇಶ ರಾಜ್ಯದಲ್ಲಿ ಭಷ್ಟಾಚಾರ ನಿರ್ಮೂಲನೆಯೇ ಮುಖ್ಯ ಧ್ಯೇಯವಾಗಿದೆ ಎಂದು ಹೇಳಿದ್ದಾರೆ


loading...

No comments