ವಾಟಾಳ್ ನಾಗರಾಜ್ ಹೇಗೆ ಹೋಳಿ ಆಚರಿಸಿದರು ಗೊತ್ತೇ ?
ಬೆಂಗಳೂರು : ಲೂಟಿಯಾ ಗುತ್ತಿರುವ ನೈಸರ್ಗಿಕ ಸಂಪತ್ತು ರಕ್ಷಣೆ, ವನ್ಯ ಜೀವಿಗಳ ಸಂರಕ್ಷಣೆಗೆ ಆಗ್ರಹಿಸಿ ವಿನೂತನ ಚಳುವಳಿಗೆ ಹೆಸರಾದ ಕನ್ನಡ ಚಳುವಳಿ ವಾಟಾಳ್ ನಾಗರಾಜ್ ಅವರು ಪ್ರಾಣಿಗಳ ಮೇಲೆ ಬಣ್ಣ ಎರಚುವ ಮೂಲಕ ಮೈಸೂರು ಬ್ಯಾಂಕ್ ವೃತ್ತದಲ್ಲಿಂದು ಬಣ್ಣದೋಕುಳಿ ಆಚರಿಸಿದರು.
ಕರ್ನಾಟಕದಲ್ಲಿ ಅಪಾರವಾದ ನೈಸರ್ಗಿಕ ಸಂಪತ್ತಿದ್ದು , ಅದನ್ನು ನಿರಂತರವಾಗಿ ಲೂಟಿ ಮಾಡಲಾಗುತ್ತಿದೆ. ಕಬ್ಬಿಣದ ಅದಿರು, ಗ್ರಾನೈಟ್, ಖನಿಜ ಸಂಪತ್ತನ್ನು ಹಲವರು ಕೊಳ್ಳೆ ಹೊಡೆಯುತ್ತಿದ್ದಾರೆ. ಇದನ್ನು ಹಿಡಿದುಕೊಟ್ಟರೂ ನಾಜೂಕಾಗಿ ಕಾನೂನಿನಿಂದ ತಪ್ಪಿಸಿಕೊಂಡು ಸಂಪತ್ತನ್ನು ಲೂಟಿ ಮಾಡುವುದನ್ನು ಮುಂದುವರೆಸಿ ರುವುದು ಅತ್ಯಂತ ಆತಂಕಕಾರಿ ವಿಷಯ ಎಂದು ಕಿಡಿಕಾರಿದರು ಎಂದು ತಿಳಿದು ಬಂದಿದೆ
loading...
No comments