Breaking News

ಟ್ವೀಟ್ ಮೂಲಕ ಕಾಲಹರಣ ಮಾಡುತ್ತಿದ್ದಾರೆ ಪ್ರತಾಪ್ ಸಿಂಹ – ಬ್ರಿಜೇಶ್ ಕಾಳಪ್ಪ ಆರೋಪ


ಮೈಸೂರು- ರಾಜ್ಯದಲ್ಲಿ ಭೀಕರ ಬರಪರಿಸ್ಥಿತಿ ಎದುರಾಗಿದ್ದು, ಕೇಂದ್ರದಿಂದ ಬರಪರಿಹಾರ ತರಿಸುವ ಕುರಿತು ಯೋಚಿಸುವುದನ್ನು ಬಿಟ್ಟು ಸಂಸದ ಪ್ರತಾಪ್ ಸಿಂಹ ವಿವಾದಾತ್ನಕ ಟ್ವೀಟ್ ಮಾಡುವ ಮೂಲಕ ಕಾಲಹರಣ ಮಾಡುತ್ತಿದ್ದಾರೆ ಎಂದು ಎಐಸಿಸಿ  ವಕ್ತಾರ ಬ್ರಿಜೇಶ್ ಕಾಳಪ್ಪ ಆರೋಪಿಸಿದ್ದಾರೆ.
ಮೈಸೂರಿನ ಜಲದರ್ಶಿನಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಬ್ರಿಜೇಶ್ ಕಾಳಪ್ಪ ಮಾತನಾಡಿ ಸೈನಿಕರೋರ್ವರ ಮಗಳನ್ನು ದಾವೂದ್ ಗೆ ಹೋಲಿಸಿ ಕೀಳುಮಟ್ಟದ ರಾಜಕೀಯ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಬರ ತಾಂಡವವಾಡುತ್ತಿದೆ ಅದರ ಕುರಿತು ಗಮನ  ಹರಿಸಲು ಸಂಸದರಿಗೆ ಪುರುಸೊತ್ತಿಲ್ಲ. ಬರಪರಿಹಾರವನ್ನು ತರುವುದು ಬಿಟ್ಟು ವೃಥಾ ವಿವಾದ ಸೃಷ್ಟಿಸುತ್ತಿದ್ದಾರೆ ಎಂದು ವಾಕ್ ಪ್ರಹಾರ ನಡೆಸಿದರು.
ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದ ನಂತರ ನೂರಾಹತ್ತು ಮಂದಿ ಸೈನಿಕರು ಹುತಾತ್ಮರಾಗಿದ್ದಾರೆ. ಆದರೆ ಮೋದಿ ಯಾವ ಸೈನಿಕರ ಮನೆಗೂ ಭೇಟಿ ನೀಡಿಲ್ಲ. ಮೋದಿ ಸರ್ಕಾರಕ್ಕೆ ಸೈನಿಕರ ಕುರಿತು ಕಾಳಜಿಯಿಲ್ಲ. ಸೈನಿಕರ ಪರಾಕ್ರಮದ ಹೆಸರಿನಲ್ಲಿ ಮೋದಿ ಪ್ರಚಾರ ಗಿಟ್ಟಿಸುತ್ತಿದ್ದಾರೆ ಎಂದರು.

loading...

No comments