ವಿನಾಯಕ ಬಾಳಿಗಾ ಹತ್ಯೆ ಪ್ರಕರಣ ಪ್ರಮುಖ ಆರೋಪಿ ನರೇಶ್ ಶೆಣೈ ಗುಂಡಾಗಿರಿ !
ಕೊಲೆ ಬೆದರಿಕೆ ದೂರು ದಾಖಲು
ಮಂಗಳೂರು: ಆರ್.ಟಿ.ಐ ಕಾರ್ಯಕರ್ತ ವಿನಾಯಕ್ ಬಾಳಿಗಾ ಕೊಲೆ ಪ್ರಕರಣದ ಪ್ರಮುಖ ಆರೋಪಿ ಸ್ಥಾನದಲ್ಲಿ ಗುರುತಿಸಿಕೊಂಡ ನರೇಶ್ ಶೆಣೈ ಮೇಲೆ ಮಂಗಳೂರಿನ ಬಂದರು ಪೊಲೀಸ್ ಠಾಣೆಯಲ್ಲಿ ಕೊಲೆ ಬೆದರಿಕೆ ದೂರು ದಾಖಲಾಗಿದೆ.ಭರತ್ ಕಾಮತ್ ಎಂಬುವವರು ನರೇಶ್ ಶೆಣೈ ತಮಗೆ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ದೂರು ದಾಖಲಿಸಿದ್ದಾರೆ .
ಕೆಲವು ದಿನಗಳ ಹಿಂದೆ ಅಯ್ಯಪ್ಪ ಸ್ವಾಮಿ ದೇವರಲ್ಲ, ದೈವ ಎಂದು ಕಾಶೀ ಮಠದ ಸಂಯಮೀಂದ್ರ ತೀರ್ಥರು ಹೇಳಿಕೆ ಕುರಿತಾಗಿ ಆಕ್ಷೇಪಿಸಿ ಭರತ್ ಕಾಮತ್ ಸಂಯಮೀಂದ್ರ ಸ್ವಾಮಿಯ ವಿರುದ್ಧ ಪ್ರಕರಣ ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಭರತ್ ಕಾಮತ್ ಅವರನ್ನು ಡೊಂಗರಕೇರಿಗೆ ಬರುವಂತೆ ಹೇಳಿದ ನರೇಶ್ ಶೆಣೈ ಅಲ್ಲಿ ಸ್ವಾಮೀಜಿಯ ವಿರುದ್ಧದ ಪ್ರಕರಣ ಹಿಂದೆಗೆಯುವಂತೆ ಒತ್ತಾಯಿಸಿದ್ದು ಅದಕ್ಕೆ ಭರತ್ ಕಾಮತ್ ಒಪ್ಪದಿದ್ದಾಗ ಅವರಿಗೆ ನರೇಶ್ ಶೆಣೈ ಕೊಲೆ ಬೆದರಿಕೆ ಒಡ್ಡಿದ್ದಾರೆ.ಭರತ್ ಕಾಮತ್ ಬಂದರು ಪೊಲೀಸರಿಗೆ ನೀಡಿದ ದೂರಿನ ಆಧಾರದ ಮೇಲೆ ನರೇಶ್ ಶೆಣೈ ವಿರುದ್ಧ ಐಪಿಸಿ ಸೆಕ್ಷನ್ 341 ಹಾಗೂ 506 ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ವಿನಾಯಕ್ ಬಾಳಿಗಾ ಕೊಲೆ ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿರುವ ನರೇಶ್ ಶೆಣೈ ಸದ್ಯ ಜಾಮೀನಿನ ಮೇಲೆ ಹೊರಗಿದ್ದಾನೆ. ಮಂಗಳೂರಿನ ಕಮಲಾ ಪಾಳಯದಲ್ಲಿ ಗುರಿತಿಸಿಕೊಂಡಿರುವ ಈತ ಯುವ ಬ್ರಿಗೇಡ್ ನಲ್ಲೂ ಸಕ್ರಿಯಾವಾಗಿ ಗುರುತಿಸಿಕೊಂಡಿದ್ದಾನೆ .
loading...
No comments