ಚುನಾವಣಾ ಗೆಲುವು ಮೋದಿಗೆ ಅಭಿನಂದನೆ ಹೇಳಿದ ಪಾಕ್ ಹುಡುಗಿ
ಇಸ್ಲಾಂಬಾದ್: 'ಉತ್ತರ ಪ್ರದೇಶ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಸಾಧಿಸಿದ ಐತಿಹಾಸಿಕ ಗೆಲುವಿಗೆ ಮೋದಿಯವರಿಗೆ ನನ್ನ ಅಭಿನಂದನೆಗಳು' ಎಂದು ಪಾಕಿಸ್ತಾನದ 11 ವರ್ಷದ ಬಾಲೆ ಅಕ್ವೀದತ್ ಪ್ರಧಾನಿ ಮೋದಿಯವರಿಗೆ ಶುಭಾಶಯ ಪತ್ರ ಕಳುಹಿಸಿದ್ದಾಳೆ.
ಆ ಪತ್ರದಲ್ಲಿ ಭಾರತೀಯರ ಮನ ಗೆದ್ದಯಂತೆಯೇ ಪಾಕಿಸ್ತಾನಿಗಳ ಮನ ಗೆಲ್ಲುವ ಕಡೆಗೂ ಗಮನ ನೀಡಿ, ಎರಡು ದೇಶಗಳ ನಡುವೆ ಶಾಂತಿ ಕಾಪಾಡುವ ಶಾಂತಿಧೂತ ನೀವಾಗಬೇಕೆಂದು ಪತ್ರದಲ್ಲಿ ಮನವಿ ಮಾಡಿದ್ದಾಳೆ.
'ಜನರ ಹೃದಯವನ್ನು ಗೆಲ್ಲುವುದು ಕಷ್ಟದ ಕೆಲಸವೆಂದು ಒಮ್ಮೆ ನನ್ನ ತಂದೆ ನನಗೆ ಹೇಳಿದ್ದರು. ಆದರೆ, ನೀವು ಭಾರತೀಯರ ಮನ ಗೆದ್ದಿರುವಿರಿ, ಆದ್ದರಿಂದಲೇ ಉತ್ತರ ಪ್ರದೇಶದಲ್ಲಿ ಗೆಲ್ಲಲು ಸಾಧ್ಯವಾಯಿತು. ನಾನೀಗ ಹೇಳುವುದೇನೆಂದರೆ ನೀವು ಇನ್ನೂ ಹೆಚ್ಚು ಭಾರತೀಯರ ಹಾಗೂ ಪಾಕಿಸ್ತಾನಿಗಳ ಹೃದಯ ಗೆಲ್ಲಬಯಸುವುದಾದರೆ ಎರಡು ದೇಶಗಳ ನಡುವೆ ಉತ್ತಮ ಸ್ನೇಹ ಹಾಗೂ ಶಾಂತಿಗೆ ಪ್ರಯತ್ನಿಸಬೇಕು. ಎರಡೂ ದೇಶಗಳ ಸಂಬಂಧ ಉತ್ತಮವಾಗಿರಬೇಕು. ಎರಡು ದೇಶಗಳ ನಡುವೆ ಶಾಂತಿಯ ಸೇತುವೆ ನಿರ್ಮಾಣವಾಗಲಿ. ನಾವು ಬುಲೆಟ್ ಬದಲು ಪುಸ್ತಕ, ಔಷಧಿ ಕೊಳ್ಳುವಂತಾಗಲಿ' ಎಂದು ಎರಡು ಪುಟಗಳ ಪತ್ರದಲ್ಲಿ ಬರೆದಿದ್ದಾಳೆ.
via vijayakarnataka
loading...
No comments