೧ ನಿಮಿಷದಲ್ಲಿ೧೨೪ ತೆಂಗಿನಕಾಯಿ ಒಡೆಯುತ್ತಾನೆ ಈತ
ಕೇರಳ ಮೂಲದ ವ್ಯಕ್ತಿಯೊಬ್ಬರು ೧ ನಿಮಿಷದಲ್ಲಿ ಬರೋಬ್ಬರಿ ೧೨೪ ತೆಂಗಿನಕಾಯಿಗಳನ್ನ ಒಡೆದು ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ.
ತ್ರಿಶೂರಿನ ಸೋಭಾ ಸಿಟಿ ಮಾಲ್‌ನಲ್ಲಿ ಆಯೋಜಿಸಲಾಗಿದ್ದ ಈ ಕಾರ್ಯಕ್ರಮದಲ್ಲಿ ಕೇರಳದ ಪೂಂಜರ್ ನಿವಾಸಿ ಅಭೀಷ್ ಪಿ ಡೊಮನಿಕ್ ಕೇವಲ ಒಂದು ನಿಮಿಷದಲ್ಲಿ ೧೨೪ ತೆಂಗಿನಕಾಯಿಗಳನ್ನ ಒಡೆದರು. ಈ ಮೂಲಕ ಡೊಮನಿಕ್ ಈ ಹಿಂದೆ ಜರ್ಮನಿಯ ಮುಹಮದ್ ಕಾಹ್ರಿಮನೋವಿಕ್ ನಿರ್ಮಿಸಿದ್ದ ದಾಖಲೆಯನ್ನು ಮುರಿದರು. ಕಾಹ್ರಿಮನೋವಿಕ್ ಒಂದು ನಿಮಿಷದಲ್ಲಿ ೧೧೮ ತೆಂಗಿನಕಾಯಿಗಳನ್ನ ಒಡೆದಿದ್ದರು. ಡೊಮನಿಕ್ ೧ ನಿಮಿಷದಲ್ಲಿ ೧೪೫ ತೆಂಗಿನಕಾಯಿಗಳನ್ನ ಒಡೆದರಾದರೂ ಅದರಲ್ಲಿ ಸಂರ್ಪೂಣವಾಗಿ ಒಡೆದಿದ್ದು ೧೨೪ ತೆಂಗಿನಕಾಯಿಗಳನ್ನ.
ಕೇರಳ ಸಾರಿಗೆ ಸಂಸ್ಥೆಯಲ್ಲಿ ಮೆಕಾನಿಕ್ ಆಗಿ ಕೆಲಸ ಮಾಡುತ್ತಿರುವ ೨೫ ವರ್ಷದ ಡೊಮನಿಕ್, ಹಾಕಿ ಸ್ಟಿಕ್, ಹೆಲ್ಮೆಟ್ ಮುರಿಯುವುದು ಹಾಗೂ ಹಲ್ಲಿನಿಂದಲೇ ೫೦ ಮೀಟರ್‍ವರೆಗೆ ಬಸ್ ಎಳೆಯುವುದು ಹೀಗೆ ವಿವಿಧ ವಿಭಾಗಗಳಲ್ಲಿ ದಾಖಲೆ ನಿರ್ಮಿಸಿದ್ದು, ಲಿಮ್ಕಾ ಬುಕ್ ಆಫ್ ರೆಕಾಡ್ರ್ಸ್, ಯುನಿವರ್ಸಲ್ ರೆಕಾರ್ಡ್ ಫೋರಂ, ರೆಕಾರ್ಡ್ ಸೆಟ್ಟರ್ ಬುಕ್ ಆಫ್ ವಲ್ರ್ಡ್ ರೆಕಾಡ್ರ್ಸ್ ಹಾಗೂ ಅಸಿಸ್ಟ್ ವಲ್ರ್ಡ್ ರೆಕಾಡ್ರ್ಸ್‌ನಲ್ಲಿ ಇವರ ಹೆಸರಿದೆ.
ಇದೀಗ ಡೊಮನಿಕ್ ಅವರು ತೆಂಗಿನಕಾಯಿ ಒಡೆದಿರುವ ವೀಡಿಯೋವನ್ನು ಗಿನ್ನಿಸ್ ಬುಕ್ ಆಫ್ ರೆಕಾಡ್ರ್ಸ್ ನವರಿಗೆ ಕಳಿಸಲಾಗಿದ್ದು ೬ ತಿಂಗಳ ಒಳಗೆ ಡೊಮನಿಕ್ ಅವರ ದಾಖಲೆಯನ್ನು ಪರಿಗಣಿಸಲಿದ್ದಾರೆ.
loading...
No comments