Breaking News

ಹೆಲ್ಮೆಟ್ ವಿತರಿಸುವ ಮೂಲಕ ಜನ್ಮದಿನ ಆಚರಿಸಿದ ಪೊಲೀಸ್ ಇನ್ಸಪೆಕ್ಟರ್



ಮೈಸೂರು:ಕೆಲವರು ತಮ್ಮ ಜನ್ಮದಿನವನ್ನು  ಕೇಕ್ ಕತ್ತರಿಸುವುದು, ದುಂದು ವೆಚ್ಚ ಮಾಡುವ ಮೂಲಕ ಆಚರಣೆ ಮಾಡುತ್ತಾರೆ. ಆದರೆ ಮೈಸೂರಿನ ಪೊಲೀಸ್ ಇನ್ಸಪೆಕ್ಟರ್ ಓರ್ವರು ಪೊಲೀಸ್ ಸಿಬ್ಬಂದಿಗಳಿಗೆ ಹಾಗೂ ಸಾರ್ವಜನಿಕರಿಗೆ ಐಎಸ್ಐ ಗುರುತಿನ ಹೆಲ್ಮೆಟ್ ನ್ನು ವಿತರಿಸುವ ಮೂಲಕ ಗಮನ ಸೆಳೆದಿದ್ದಾರೆ.
ಮೈಸೂರು ಮೃಗಾಲಯದ ಎದುರು ನಗರದ ಸಿದ್ದಾರ್ಥ ಸಂಚಾರಿ ಠಾಣೆಯ ಇನ್ಸಪೆಕ್ಟರ್ ಹರೀಶ್ ಕುಮಾರ್ ಪೊಲೀಸ್ ಸಿಬ್ಬಂದಿಗಳಿಗೆ ಹಾಗೂ ಸಾರ್ವಜನಿಕರಿಗೆ ಐಎಸ್ಐ ಗುರುತಿನ ಹೆಲ್ಮೆಟ್ ನ್ನು ಉಚಿತವಾಗಿ ವಿತರಿಸಿದರು. ಬಳಿಕ ಮಾತನಾಡಿದ ಅವರು ಅನವಶ್ಯಕ ದುಂದುವೆಚ್ಚಗಳನ್ನು ಮಾಡಿ ಜನ್ಮದಿನವನ್ನು ಆಚರಿಸುವ ಬದಲು ನಾಲ್ಕು ಜನರಿಗೆ ಉಪಯೋಗವಾಗುವಂತಹ ಯಾವುದಾದರೂ ಕಾರ್ಯ ನಡೆಸಿದರೆ ಆತ್ಮತೃಪ್ತಿ ಹಾಗೂ ಖುಷಿ ಸಿಗಲಿದೆ. ಇದರಿಂದ ಐಎಸ್ಐ ಗುರುತಿನ ಹೆಲ್ಮೆಟ್ ವಿತರಿಸುತ್ತಿದ್ದೇನೆ. ಕೆಲವರು ಪೊಲೀಸರು ಎಲ್ಲಿ ನಮ್ಮನ್ನು ಹಿಡಿದು ದಂಡ ಕಟ್ಟಿಸಿಕೊಳ್ಳುತ್ತಾರೋ ಎಂಬ ಭಯದಿಂದ 50, 100 ರೂ.ಗಳನ್ನು ನೀಡಿ ಕಳಪೆ ಹೆಲ್ಮೆಟ್ ಗಳನ್ನು ಖರೀದಿಸಿ ಧರಿಸುತ್ತಾರೆ. ಇದು ಸುರಕ್ಷಿತವಾಗಿರಲಾರದು. ಉತ್ತಮ ಗುಣಮಟ್ಟದ ಹೆಲ್ಮೆಟ್ ಧರಿಸಿ ವಾಹನ ಚಲಾಯಿಸಿ. ನಿಮ್ಮನ್ನೇ ನಂಬಿದ ಕುಟುಂಬ ನಿಮಗಾಗಿ ಕಾಯುತ್ತಿರುತ್ತದೆ ಎಂದು ತಿಳಿಸಿದರು.

-snaje vani

loading...

No comments