Breaking News

ಸಹರಾ ಡೈರಿ ಕೇಸ್‌ ಸಿಬಿಐಗೆ ವಹಿಸಿದರೆ ನಾವೂ ರೆಡಿ: ಸಿಎಂಕಲಬುರಗಿ: ಸಹರಾ ಡೈರಿ ಪ್ರಕರಣ ಸಿಬಿಐಗೆ ವಹಿಸಿದರೆ ಮಾತ್ರ ನಾವೂ ಪ್ರಕರಣವನ್ನು ಸಿಬಿಐಗೆ ವಹಿಸಲು ಸಿದ್ಧ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

'ಡೈರಿ ನಾನ್‌ಸೆನ್ಸ್‌ ವಿಷಯ. ಆದಾಯ ತೆರಿಗೆ ಇಲಾಖೆಯಿಂದ ಪ್ರಕರಣದ ತನಿಖೆ ನಡೆಯುತ್ತಿದೆ. ಇಲಾಖೆ ಅಧಿಕಾರಿಗಳು ಡೈರಿ ಬಗ್ಗೆ ಮಾತನಾಡಿದ್ದಾರಾ ? ' ಎಂದು ಅವರು ಪ್ರಶ್ನಿಸಿದ್ದಾರೆ.

ಯುಪಿಎ ಸರಕಾರ ಅಧಿಕಾರದಲ್ಲಿದ್ದಾಗ ಬಿಜೆಪಿಯವರು ಸಿಬಿಐಯನ್ನು ಚೋರ್‌ ಬಚಾವೋ ಇನ್‌ಸ್ಟಿಟ್ಯೂಟ್‌ ಎನ್ನುತ್ತಿದ್ದರು. ಈಗ ಅವರು ಅಧಿಕಾರಕ್ಕೆ ಬಂದ ತಕ್ಷಣವೇ ಏಕಾಏಕಿ ವಿಶ್ವಾಸ ಎಲ್ಲಿಂದ ಬಂತು?,' ಎಂದು ಪ್ರಶ್ನಿಸಿದ್ದಾರೆ.

ಡೈರಿ ವಿಷಯ ಬಯಲಾದರೆ ಸಿದ್ದರಾಮಯ್ಯ ಮತ್ತು ಅವರ ಸಂಪುಟದ ಅರ್ಧ ಸಚಿವರು ಜೈಲಿಗೆ ಹೋಗುತ್ತಾರೆ ಎನ್ನುವ ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ ಏನು ಜಡ್ಜ್‌ ಆಗಿದ್ದಾರಾ ?, ಜೈಲಿಗೆ ಹೋಗಿ ಬಂದವರಿಂದ ಕಲಿಯಬೇಕಾಗಿರುವುದು ಏನೂ ಇಲ್ಲ,' ಎಂದಿದ್ದಾರೆ.

loading...

No comments