ಮಸೀದಿಗೆ ಕಲ್ಲು ತೂರಿ ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದ ಆರೋಪಿ
ಉಳ್ಳಾಲ : ತೊಕ್ಕೊಟ್ಟು ಸಮೀಪ ಇರುವ ಮಸೀದಿಗೆ ಕಿಡಿಗೇಡಿಯೊಬ್ಬ ಕಲ್ಲು ಎಸೆದ ಘಟನೆ ನಿನ್ನೆ ರಾತ್ರಿ ವರದಿ ಆಗಿದೆ .ಘಟನೆ ಸಂಬಂಧ ಆರೋಪಿಯನ್ನು ಸಾರ್ವಜನಿಕರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ .ಆರೋಪಿಯನ್ನು ಭಟ್ನಾಗರ್ ನಿವಾಸಿ ಸಾಗರ್ (22 ) ಎಂದು ಗುರುತಿಸಲಾಗಿದೆ .ಘಟನೆ ಬಗ್ಗೆ ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮುಂದು ವರಿಸಿದ್ದಾರೆ ಎಂದು ತಿಳಿದು ಬಂದಿದೆ .
loading...
No comments