Breaking News

ರಾಜ್ಯಸಭೆಯಲ್ಲಿ ಹಿಂದೂಸ್ಥಾನ್ ಕಾ ಶೇರ್ ಆ ಗಯಾ ಎಂಬ ಘೋಷಣೆ ಮೊಳಗಿದ್ದು ಯಾಕೆ



ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ರಾಜ್ಯಸಭಾ ಪ್ರಶ್ನೋತ್ತರ ವೇಳೆ ಆಗಮಿಸಿದಾಗ, 'ನೋಡಿ ನೋಡಿ ಯಾರು ಬಂದರು' ಅಂತ ಪ್ರತಿಪಕ್ಷಗಳು ಅಣಕಿಸಿದಾಗ ಭಾರತದ ಸಿಂಹ ಆಗಮಿಸಿದೆ ಎಂದು ಬಿಜೆಪಿಯವರು ಕೂಗಿದ ಸ್ವಾರಸ್ಯಕರ ಘಟನೆಗೆ ರಾಜ್ಯಸಭೆ ಸಾಕ್ಷಿಯಾಯಿತು.
ಪ್ರಧಾನ ಮಂತ್ರಿ ಹಾಗೂ ಅವರ ಕಚೇರಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಪ್ರತಿ ಗುರುವಾರ ಕೇಳಲಾಗುತ್ತದೆ. ಉತ್ತರ ಪ್ರದೇಶ ಚುನಾವಣೆಯಲ್ಲಿ ಐತಿಹಾಸಿಕ ಗೆಲುವು ಸಾಧಿಸಿದ ಬಳಿಕ ರಾಜ್ಯಸಭೆಯಲ್ಲಿ ಮೊದಲ ಬಾರಿ ಪ್ರಧಾನಿ ಕಾಣಿಸಿಕೊಂಡರು. 15 ನಿಮಿಷಕ್ಕೂ ಹೆಚ್ಚು ಕಾಲ ಕಲಾಪದಲ್ಲಿ ಭಾಗವಹಿಸಿದರು ಎಂದು ಹೇಳಲಾಗಿದೆ



loading...

No comments