ಧನುಷ್ ಡಿ.ಎನ್.ಎ ಪರೀಕ್ಷೆ ಮಾಡಿಸಿ, ಆತ ನಮ್ಮ ಮಗ ಎಂದು ಸಾಬೀತಾಗುತ್ತೆ
ತಮಿಳುನಾಡು : ತಮಿಳಿನ ಹೆಸರಾಂತ ನಟ ಧನುಷ್ ಕಳೆದ ಕೆಲ ಸಮಯಗಳಿಂದ ಹೊಸ ವಿವಾದದಲ್ಲಿ ಸಿಲುಕಿ ಹಾಕಿಕೊಂಡಿದ್ದಾರೆ. ಮೇಲೂರಿನ ಮಲಂಪಟ್ಟಿಯ ಕದಿರೇಸನ್ ಮತ್ತು ಮೀನಾಕ್ಷಿ ಎಂಬ ವೃದ್ಧ ದಂಪತಿ ನಟ ಧನುಷ್ ತಮ್ಮ ಮಗ ಎಂದು ವಾದಿಸುತ್ತಿದ್ದು, ಧನುಷ್ ನನ್ನು ಡಿ.ಎನ್.ಎ ಪರೀಕ್ಷೆಗೆ ಒಳಪಡಿಸುವಂತೆ ಕದಿರೇಸನ್ ಮದ್ರಾಸ್ ಹೈಕೋರ್ಟ್ ನ ಮದುರೈ ಪೀಠಕ್ಕೆ ಗುರುವಾರ ಮನವಿ ಅರ್ಜಿ ಸಲ್ಲಿಸಿದ್ದಾರೆ.
ಧನುಷ್ ನಮ್ಮ ಮಗ ಎಂಬುದು ಆತನನ್ನು ಡಿ.ಎನ್.ಎ ಪರೀಕ್ಷೆಗೆ ಒಳಪಡಿಸಿದರೆ ಸಾಬೀತಾಗುತ್ತಾದೆ. ಆದ್ದರಿಂದ ಆತನನ್ನು ಡಿ.ಎನ್.ಎ ಪರೀಕ್ಷೆಗೆ ಒಳಪಡಿಸಲು ಸೂಚನೆ ನೀಡಲು ಕದಿರೇಸನ್ ಮದ್ರಾಸ್ ಹೈಕೋರ್ಟ್ ನ ಮದುರೈ ಪೀಠಕ್ಕೆ ನೀಡಿದ ಅರ್ಜಿಯಲ್ಲಿ ಮನವಿ ಮಾಡಿದ್ದಾರೆ. ಧನುಷ್ ನಮ್ಮ ಮೂರನೇ ಮಗನಾಗಿದ್ದು ಚಿಕ್ಕ ಪ್ರಾಯದಲ್ಲೇ ನಮ್ಮಿಂದ ದೂರವಾಗಿದ್ದಾನೆ. ಆತನಿಗಾಗಿ ಹಲವು ವರ್ಷಗಳಿಂದ ಹುಡುಕುತ್ತಿದ್ದ ನಮಗೆ ಆತನ ಸಿನಿಮಾ ನೋಡಿ ನಮ್ಮ ಮಗ ಎಂಬುದು ಗೊತ್ತಾಯಿತು. ವೃದ್ಧಾಪ್ಯದಲ್ಲಿರುವ ನಮಗೆ ಮನೆ ನಿರ್ವಹಣೆಗೆ, ಔಷದಿ ಮುಂತಾದ ವೆಚ್ಚಗಳಿಗೆ ತಿಂಗಳಿಗೆ 65,000ರೂಪಾಯಿ ಪರಿಹಾರ ದೊರಕಿಸಿಕೊಡಬೇಕೆಂದು ಕೋರ್ಟ್ ನಲ್ಲಿ ಮನವಿ ಮಾಡಿದ್ದಾರೆ. ತಮಿಳುನಾಡಿನಾದ್ಯಂತ ಈ ವಿಷಯ ಪರ-ವಿರೋಧದ ಚರ್ಚೆಗೆ ಕಾರಣವಾಗಿದೆ.
loading...
No comments