ಪತಿಯ ಗೆಳೆಯನೊಂದಿಗೆ ರಾಸಲೀಲೆ, ವೀಡಿಯೋ ವೈರಲ್ ಆಗಿದ್ದಕ್ಕೆ ಆತ್ಮಹತ್ಯೆಗೆ ಶರಣಾದ ಮಹಿಳೆ
ಮದ್ದೂರು : ವಿವಾಹಿತ ಮಹಿಳೆಯೋರ್ವಳು ತನ್ನ ಪತಿಯ ಸ್ನೇಹಿತನೊಂದಿಗೆ ನಡೆಸಿದ ರಾಸಲೀಲೆಯ ವೀಡಿಯೋ ವೈರಲ್ ಆದ ಕಾರಣ ಮನನೊಂದು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮೃತ ಮಹಿಳೆ ಹೆಸರು ಸಂಗೀತ ಎಂದು ತಿಳಿದುಬಂದಿದ್ದು, ಮದ್ದೂರಿನ ಸೋಮನಹಳ್ಳಿ ಗ್ರಾಮದ ತನ್ನ ಮನೆಯಲ್ಲೇ ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಸಂಗೀತ ತನ್ನ ಪತಿಯ ಗೆಳೆಯ ಅನಿಲ್ ನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು, ಇವರಿಬ್ಬರು ನಡೆಸಿದ ರಾಸಲೀಲೆಯನ್ನು ಮೊಬೈಲ್ನಲ್ಲಿ ಚಿತ್ರೀಕರಿಸಲಾಗಿದ್ದು ಆ ವೀಡಿಯೋ ಇತ್ತೇಚೆಗೆ ವೈರಲ್ ಆಗಿದೆ. ಇದರಿಂದ ಮನನೊಂದ ಸಂಗೀತಾ ಮನೆಯಲ್ಲಿ ನೇಣಿಗೆ ಶರಣಾಗಿದ್ದಾಳೆ. ಪ್ರಕರಣ ಸಂಬಂಧ ಮದ್ದೂರು ಪೋಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದ್ದು, ಪೋಲೀಸರು ತನಿಖೆ ನಡೆಸುತ್ತಿದ್ದಾರೆ.
loading...
No comments