Breaking News

ಅನಾಥ ನಾಯಿಗಳಿಗೆ ಅನ್ನದಾತ ಫರ್ಷಿಪ್ ಡಿಸೋಜ


ಬಹುವಿಧ ಪಕ್ಷಿ ಸಂತತಿ, ಕಾಡು ಪ್ರಾಣಿಗಳು ಮತ್ತು ಇತರ ಜೀವಜಂತುಗಳು, ಪ್ರಕೃತಿ ಮಾತೆಯನ್ನು ಅವಲಂಬಿಸಿ ಬದುಕು ಸಾಗಿಸುತ್ತವೆ. ದನ, ಬೆಕ್ಕು, ನಾಯಿ ಮುಂತಾದ ಸಾಕು ಪ್ರಾಣಿಗಳು ಮಾನವನನ್ನು ನಂಬಿ ಬದುಕು ಸಾಗಿಸುತ್ತವೆ. ಅವುಗಳು ವಾರಸುದಾರರು ನೀಡಿದ ಅನ್ನದ ಋಣವನ್ನು ತಮ್ಮ ಉಪಕಾರದ ಕರ್ತವ್ಯಪ್ರಜ್ಞೆಯಿಂದ ತೀರಿಸುತ್ತವೆ.
ನಾಯಿ ಸಾಕುವವರು, ನಾಯಿ ಮರಿ ಹಾಕಿದಾಗ ಗಂಡು ಮರಿಗಳಿಗೆ ಬೇಡಿಕೆ ಇರುವುದರಿಂದ ಸಾಕಲು ಬೇಕಾದವರಿಗೆ ತೆಗೆದುಕೊಂಡು ಹೊಗಲು ಕೊಡುತ್ತಾರೆ ಅಥವಾ ಮಾರಾಟ ಮಾಡುತ್ತಾರೆ. ಹೆಣ್ಣು ಮರಿಗಳನ್ನು ಸಾಕಲು ಯಾರೂ ಇಷ್ಟಪಡದ ಕಾರಣ ಎಲ್ಲಿಯಾದರೂ ದೂರ ಬಿಟ್ಟು ಬರುತ್ತಾರೆ. ಅವು ಅನ್ನ ಆಹಾರ ಸಿಗದೆ ಸಾಯುವುದುಂಟು.
ಹೀಗೆ ಒಟ್ಟುಗೂಡಿದ ನಲವತ್ತಕ್ಕೂ ಅಧಿಕ ಬೀದಿ ನಾಯಿಗಳು ಉಡುಪಿ ನಗರದ ಹೊರವಲಯದಲ್ಲಿರುವ ವಾಯುವಿಹಾರ ತಾಣ, ಭುಜಂಗ ಪಾರ್ಕಿನಲ್ಲಿ ವಾಸ ಮಾಡಿಕೊಂಡಿವೆ. ಅಷ್ಟೊಂದು ನಾಯಿಗಳಿಗೆ ಅಲ್ಲಿ ಆಹಾರ ಸಿಗುವುದಾದರೂ ಹೇಗೆ ? ಎಲ್ಲಾ ಬೀದಿ ನಾಯಿಗಳು ಸರಿಯಾದ ಆಹಾರ ಹೊಟ್ಟೆಗೆ ಸಿಗದೆ ಬಡಕಲುಗಳಾಗಿದ್ದವು. ನಿತ್ಯ ಮುಂಜಾನೆ ಪಾರ್ಕಿಗೆ ವಾಯುವಿಹಾರಕ್ಕೆ ಬರುವ ಸ್ಥಳಿಯ ವ್ಯಕ್ತಿ ಬೈಲೂರಿನ ಫರ್ಷಿಪ್ ಡಿಸೋಜ ಅವುಗಳ ಚಿಂತಾಜನಕ ಪರಿಸ್ಥಿತಿಯನ್ನು ಹತ್ತಿರದಿಂದ ಕಂಡು ಮರುಕಪಟ್ಟರು. ಪ್ರತಿದಿನ ಮನೆಯಿಂದ ಬರುವಾಗ ಫರ್ಷಿಪ ಡಿಸೋಜರು ಆಹಾರವನ್ನು ತಂದು ಬೀದಿ ನಾಯಿಗಳಿಗೆ ನೀಡಲು ಪ್ರಾರಂಬಿಸಿದರು. ಹೀಗೆ ಈ ಅನಾಥ ನಾಯಿಗಳಿಗೆ ಹತ್ತು ವರ್ಷಗಳಿಂದ ಪ್ರತಿನಿತ್ಯ ಹೊಟ್ಟೆಗೆ ಆಹಾರ ನೀಡುತ್ತ ಬಂದಿದ್ದಾರೆ.
ಪರ್ಷಿಫ್ ಡಿಸೋಜರು ವಾಯುವಿಹಾರಕ್ಕೆ ಪಾರ್ಕಿಗೆ ಬರವ ನಿಗದಿತ ಸಮಯಕ್ಕೆ ಅವರು ಆಹಾರ ನೀಡುವ ಸ್ಥಳದಲ್ಲಿ ನಾಯಿಗಳು ಬಂದು ಗುಂಪಾಗಿ ನಿಂತಿರುತ್ತವೆ. ಪರ್ಷಿಫ್ ಅವರು ಬೀದಿ ನಾಯಿಗಳಿಗಳೊಂದಿಗೆ ಅವರ ಮಾತೃ ಭಾಷೆ ಕೊಂಕಣಿಯಲ್ಲಿ ವ್ಯವಹರಿಸುತ್ತಾರೆ. ಅವರ ಪ್ರತಿ ಮಾತುಗಳಿಗೂ ನಾಯಿಗಳು ಸ್ಪಂದಿಸುತ್ತವೆ.
ನಾಯಿಗಳು ತಾವೇ ಕಚ್ಚಾಟ ಮಾಡಿಕೊಂಡು ಗಾಯಗೊಂಡಾಗ ಮತ್ತು ವಿಘ್ನ ಸಂತೋಷಿಗಳ ಕಲ್ಲೆಸತಗಳಿಗೆ ಗಾಯಗೊಂಡಾಗ, ಪರ್ಷಿಫ್ ಅವರು ಗಾಯಗಳಿಗೆ ಔಷಧಿ ಲೇಪಿಸಿ ಗುಣಮುಖಗೊಳಿಸಿದ್ದಾರೆ. ತಮ್ಮ ಮನೆಯಲ್ಲಿ ವಿದೇಶಿ ತಳಿಯ ಕೆಲವು ಬಗೆಯ ನಾಯಿಗಳನ್ನು ಸಾಕಿದ್ದಾರೆ. ಪರ್ಷಿಫ್ ಡಿಸೋಜ ಅವರ ಶ್ವಾನಪ್ರೇಮ. ಭುಜಂಗ ಪಾರ್ಕಿಗೆ ಬರುವ ನಿಸರ್ಗಪ್ರಿಯರಿಂದ ಪ್ರಶಂಸೆಗೆ ಪಾತ್ರವಾಗಿದೆ.
via karavali ale

loading...

No comments