Breaking News

ಡಿಯು ಕಾಲೇಜು ಘರ್ಷಣೆ 'ಎಬಿವಿಪಿ'ಯಿಂದ ಇಬ್ಬರು ಕಾರ್ಯಕರ್ತರ ಅಮಾನತು


ನವದೆಹಲಿ : ದೆಹಲಿಯ ರಾಜ್ ಜಾಸ್ (ಡಿಯು) ನಲ್ಲಿ ಎಬಿವಿಪಿ ಹಾಗೂ ಎಐಎಸ್ಎ ಸಂಘಟನೆ ಕಾರ್ಯಕರ್ತರ ನಡುವಿನ ಘರ್ಷಣೆ ನಂತರ ಬಂಧಿತರಾಗಿರುವ ಎಬಿವಿಪಿಯ ಇಬ್ಬರು ಕಾರ್ಯಕರ್ತರನ್ನು ಎಬಿವಿಪಿ ವಿದ್ಯಾರ್ಥಿ ಸಂಘಟನೆಯಿಂದ ಅಮಾನತು ಮಾಡಲಾಗಿದೆ. ಎಬಿವಿಪಿ ವಿದ್ಯಾರ್ಥಿ ಸಂಘಟನೆಯ ಪ್ರಶಾಂತ್ ಮಿಶ್ರಾ ಹಾಗೂ ವಿನಾಯಕ್ ಶರ್ಮಾ ಅಮಾನತುಗೊಂಡ ಕಾರ್ಯಕರ್ತರು.

ಈ ಇಬ್ಬರು ಎಬಿವಿಪಿ ಕಾರ್ಯಕರ್ತರ ಮೇಲೆ ಅಖಿಲ ಭಾರತ ವಿದ್ಯಾರ್ಥಿ ಒಕ್ಕೂಟದ (ಎಐಎಸ್‍ಎ) ಕಾರ್ಯಕರ್ತರಾದ ರಾಜ್‍ಸಿಂಗ್ ಮತ್ತು ಉತ್ಕರ್ಷ್ ಭಾರದ್ವಾಜ್ ಅವರ ಕತ್ತುಹಿಸುಕಿ ಕೊಲೆ ಮಾಡಲು ಯತ್ನಿಸಿದ್ದಾರೆ ಎಂಬ ಆರೋಪವಿದೆ.

ಇದೇ ಸಂದರ್ಭದಲ್ಲಿ ಮಾತನಾಡಿದ ಎಬಿವಿಪಿ ರಾಷ್ಟ್ರೀಯ ಮಾಧ್ಯಮ ಸಂಚಾಲಕ   ಸಾಕೇತ್ ಭುವನ್, ಎಬಿವಿಪಿ ಸಂಘಟನೆಯ ಸದಸ್ಯರು ಇಂತಹ ಕೃತ್ಯವನ್ನು ಎಸಗಿದ್ದರೇ ನಾವು ನಿಜಕ್ಕೂ ಅದನ್ನು ಖಂಡಿಸುತ್ತೇವೆ ಮತ್ತು ಅವರ ವಿರುದ್ಧ ಇನ್ನೂ ಹೆಚ್ಚಿನ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.
loading...

No comments