ಇಸ್ರೋ ದಾಖಲೆಯ 104ಉಪಗ್ರಹ ಉಡಾವಣೆ, ಡೊನಾಲ್ಡ್ ಟ್ರಂಪ್ ಗೆ ಆಘಾತ
ಅಮೇರಿಕಾ : ಭಾರತದ ಇಸ್ರೋ ಸಂಸ್ಥೆ ಏಕಕಾಲಕ್ಕೆ 104 ಉಪಗ್ರಹಗಳನ್ನು ಯಶಸ್ವಿಯಾಗಿ ಉಡ್ಡಯನ ಮಾಡಿದ್ದನ್ನು ಅಂದಿನ ಪತ್ರಿಕೆಯಲ್ಲಿ ಓದಿ ನನಗೆ ಆಘಾತವಾಯಿತು. ಅಮೇರಿಕಾ ಇಂತಹ ವಿಷಯಗಳಲ್ಲಿ ಹಿಂದೆ ಬೀಳುವುದು ಸಹಿಸಲಸಾದ್ಯ ಎಂದು ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಭಾರತದ ಬಾಹ್ಯಾಕಾಶ ಸಂಶೋಧನ ಸಂಸ್ಥೆ ಕಳೆದ ಫೆಬ್ರವರಿ 15 ರಂದು ಏಕಕಾಲಕ್ಕೆ ಒಂದೇ ಉಡ್ಡಯನ ವಾಹನದಲ್ಲಿ 104 ಉಪಗ್ರಹಗಳನ್ನು ಕಕ್ಷೆಗೆ ತಲುಪಿಸುವ ಮೂಲಕ ದಾಖಲೆ ಮಾಡಿತ್ತು. ಇಸ್ರೋದ ದಾಖಲೆ ದೇಶ ವಿದೇಶಗಳಲ್ಲಿ ಪ್ರಶಂಸೆಗೆ ಪಾತ್ರವಾಗಿತ್ತು. ಈಗ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಇಸ್ರೋ ದಾಖಲೆಯ ಬಗ್ಗೆ ಮಾತನಾಡಿದ್ದಾರೆ.
ಅಮೇರಿಕಾ ಕಾಂಗ್ರೆಸ್ ಸದಸ್ಯರನ್ನುದ್ದೇಶಿಸಿ ಮೊದಲ ಬಾರಿಗೆ ಅಧ್ಯಕ್ಷೀಯ ಭಾಷಣ ಮಾಡಿದ ಡೊನಾಲ್ಡ್ ಟ್ರಂಪ್ ಭಾರತ ಏಕಕಾಲಕ್ಕೆ 104 ಉಪಗ್ರಹಗಳನ್ನು ಉಡಾವಣೆ ಮಾಡಿರುವ ಬಗ್ಗೆ ಅಂದು ಪತ್ರಿಕೆಗಳಲ್ಲಿ ಓದಿ ನನಗೆ ಆಘಾತವಾಯಿತು. ಅಮೇರಿಕಾ ಇಂತಹ ವಿಷಯಗಳಲ್ಲಿ ಹಿಂದೆ ಬೀಳುವುದು ಸಹಿಸಲಸಾದ್ಯ ಎಂದಿದ್ದಾರೆ
loading...
No comments