ಸೌದಿ ಈಜು ಕೊಳದಲ್ಲಿ ಮುಳುಗಿ ಮೂವರು ಭಾರತೀಯ ಬಾಲಕರ ಸಾವು
ದಮ್ಮಾಮ್ : ಸೌದಿ ಅರೇಬಿಯಾದ ದಮ್ಮಾಮ್ ನಲ್ಲಿ ಈಜು ಕೊಳದಲ್ಲಿ ಮುಳುಗಿ ಭಾರತ ಮೂಲದ ಮೂರು ಮಕ್ಕಳು ದಾರುಣವಾಗಿ ಮೃತರಾಗಿದ್ದಾರೆ. ಮೃತರಲ್ಲಿ ಇಬ್ಬರು ಬಾಲಕರು ಕೇರಳದ ಕೊಲ್ಲಂನ ವ್ಯಕ್ತಿಯ ಮಕ್ಕಳಾದರೆ ಮತ್ತೊಬ್ಬ ಬಾಲಕ ಗುಜರಾತ್ ನ ವ್ಯಕ್ತಿಯೊಬ್ಬರ ಮಗ. ಘಟನೆ ಧಮ್ಮಾಮ್ ನ ಫಸ್ಟ್ ಇಂಡಸ್ಟ್ರಿಯಲ್ ಸಿಟಿಯ ರೆಸಿಡೆನ್ಸಿಯಲ್ ಲೇಔಟ್ ನಲ್ಲಿ ಸಂಭವಿಸಿದೆ.
ಮೃತ ಬಾಲಕರಲ್ಲಿ ಸೌಫಾನ್ ಮತ್ತು ಸಾಫ್ವಾನ್ ಸಹೋದರರಾಗಿದ್ದು ಕೇರಳದ ಕೊಲ್ಲಂಕರ್ ನಾಗಪಳ್ಳಿಯ ಬಶೀರ್ ಹಾಗೂ ಸೌಮಿ ದಂಪತಿಯ ಪುತ್ರರಾಗಿದ್ದಾರೆ. ಮತ್ತೊಬ್ಬ ಬಾಲಕ ಗುಜರಾತ್ ಮೂಲದವನಾಗಿದ್ದಾನೆ.
ಪಾಳು ಬಿದ್ದಿದ್ದ ಈಜುಕೊಳ ಕಳೆದ ವಾರ ಸೌದಿಯಲ್ಲಾದ ಅಕಾಲಿಕ ಮಳೆಯಿಂದಾಗಿ ತುಂಬಿಕೊಂಡಿತ್ತು. ಸೋಮವಾರದಂದು ಮಕ್ಕಳು ಕೆರೆಯ ಬಳಿ ಆಟವಾಡಲು ಹೋಗಿದ್ದು ಮೊದಲು 4ರ ಹರೆಯದ ಸೌಫಾನ್ ನೀರಿಗೆ ಬಿದ್ದಿದ್ದಾನೆ, ಆತನನ್ನು ರಕ್ಷಿಸಲು ಹೋದ ಆತನ ಸಹೋದರ 6ವರ್ಷದ ಸಾಫ್ವಾನ್ ಹಾಗೂ ಗುಜರಾತೀ ಬಾಲಕ ಇಬ್ಬರೂ ನೀರಿಗೆ ಬಿದ್ದಿದ್ದು, ಮೂವರೂ ಮೇಲೆ ಬರಲಾಗದೆ ನೀರಿನಲ್ಲಿ ಮುಳುಗ ತೊಡಗಿದ್ದಾರೆ. ಅಲ್ಲೇ ಆಟವಾಡುತ್ತಿದ್ದ ಇತರ ಮಕ್ಕಳು ಓಡಿ ಹೋಗಿ ಹಿರಿಯರನ್ನು ಕರೆತಂದು ಮಕ್ಕಳನ್ನು ಮೇಲಕ್ಕೆತ್ತಿ ಆಸ್ಪತ್ರೆಗೆ ಕೊಂಡುಹೋದರೂ ಮೂವರೂ ಮಕ್ಕಳು ಅದಾಗಲೇ ಇಹಲೋಕ ತ್ಯಜಿಸಿದ್ದರು.
loading...
No comments