Breaking News

ತನ್ನ ತಂದೆ ದೇಶಕ್ಕಾಗಿ ಮಾಡಿದ ತ್ಯಾಗವನ್ನು ಗುರ್ ಮೆಹರ್ ಕೌರ್ ದುರುಪಯೋಗ ಪಡಿಸಿಕೊಂಡಳು - ಪ್ರತಾಪ್ ಸಿಂಹ



ಮೈಸೂರು : "ಪಾಕಿಸ್ತಾನ ತನ್ನ ತಂದೆಯನ್ನು ಕೊಂದಿಲ್ಲ, ಯುದ್ಧ ಕೊಂದಿದ್ದು" ಎನ್ನುವ ಮೂಲಕ ವಿವಾದ ಸೃಷ್ಟಿಸಿದ್ದ ಕಾರ್ಗಿಲ್ ಹುತಾತ್ಮ ಯೋಧ 'ಮಂಗಲ್ ದೀಪ್ ಸಿಂಗ್' ಪುತ್ರಿ 'ಗುರ್ ಮೆಹರ್ ಕೌರ್' ತನ್ನ ತಂದೆ ದೇಶಕ್ಕಾಗಿ ಮಾಡಿದ ತ್ಯಾಗವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆಂದು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ 'ಎಬಿವಿಪಿ' ವಿರುದ್ಧ ಪೋಸ್ಟ್ ಹಾಕಿ 'ನಾನು ಎಬಿವಿಪಿಗೆ ಹೆದರಲ್ಲ' ಎಂದು ಆಂದೋಲನ ಶುರು ಮಾಡಿದ್ದ ಗುರ್ ಮೆಹರ್ ಕೌರ್ ನಂತರ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ತನ್ನ ತಂದೆಯನ್ನು ಕೊಂದಿದ್ದು ಪಾಕಿಸ್ತಾನವಲ್ಲ, ಯುದ್ಧದಿಂದಾಗಿ ತನ್ನ ತಂದೆ ಬಲಿಯಾದರು ಎನ್ನುವ ಮೂಲಕ ದೊಡ್ಡ ವಿವಾದವನ್ನು ತನ್ನ ಮೇಲೆ ಎಳೆದು ಹಾಕಿದ್ದಳು. ಇದು ದೇಶಾದ್ಯಂತ ಪರ ವಿರೋಧ ಚರ್ಚೆಗೆ ಕಾರಣವಾಗಿತ್ತು. ಇದೇ ಸಂದರ್ಭದಲ್ಲಿ ಸಂಸದ ಪ್ರತಾಪ್ ಸಿಂಹ ಮಾಡಿದ ಟ್ವೀಟ್ ವಿವಾದಕ್ಕೆ ಕಾರಣವಾಗಿತ್ತು.

ಗುರ್ ಮೆಹರ್ ಜೊತೆ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಫೋಟೋ ಹಾಕಿ ವಿಡಂಬನೆ ಮಾಡಲು ಹೋಗಿ ಠೀಕೆಗೆ ಗುರಿಯಾದ ಸಂಸದ ಪ್ರತಾಪ್ ಸಿಂಹ ಮೈಸೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ತಮ್ಮ ಟ್ವೀಟ್ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಆ ಫೋಟೋ ನನಗೆ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಿದ್ದು. ದಾವೂದ್ ಇಬ್ರಾಹಿಂ ಪೋಟೋದೊಂದಿಗೆ ಗುರ್ ಮೆಹರ್ ಫೋಟೋ ಹಾಕಿದ್ದು ಅವಳದ್ದು ಅಪ್ರಬುದ್ಧ ಹೇಳಿಕೆಯೆಂದು ತೋರ್ಪಡಿಸಲು ಹೊರತು ಅವಳನ್ನು ಪಾತಕಿ ದಾವೂದ್ ಇಬ್ರಾಹಿಂನೊಂದಿಗೆ ಹೋಲಿಸಲು ಅಲ್ಲ ಎಂದರು.

ದೇಶಕ್ಕಾಗಿ ತಮ್ಮ ಜೀವವನ್ನೇ ತ್ಯಾಗ ಮಾಡಿದ ವೀರಯೋಧ ಮಂಗಲ್ ದೀಪ್ ಸಿಂಗ್ ಮಗಳಾಗಿ ಗುರ್ ಮೆಹರ್ ಕೌರ್ ನೀಡಿದ ಅಪ್ರಬುದ್ಧ ಹೇಳಿಕೆ ರಾಜಕೀಯ ರಂಗು ಪಡೆದು ಯೋಧ ಮಂಗಲ್ ದೀಪ್ ಸಿಂಗ್ ಅವರ ತ್ಯಾಗ ದುರ್ಬಳಕೆಯಾಯಿತು.  ಇದಕ್ಕೇ ಗುರ್ ಮೆಹರ್ ಕೌರ್ ಮುಖ್ಯ ಕಾರಣ. ಈಗ ಗುರ್ ಮೆಹರ್ ಗೆ ತನ್ನ ತಪ್ಪಿನ ಅರಿವಾಗಿದೆ, ತಮ್ಮ ತಂದೆಯ ತ್ಯಾಗ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂಬುದನ್ನು ಅರಿತ ಆಕೆ ತನ್ನ ಆಂದೊಲನದಿಂದ ಹಿಂದೆ ಸರಿದಿದ್ದಾಳೆ ಎಂದರು.
loading...

No comments