Breaking News

ಹೆಬ್ಬುಲಿ ಚಲನಚಿತ್ರ ದಾಖಲೆಯ ಗಳಿಕೆ ಮಾಡುತ್ತಿದ್ದರು ಕಿಚ್ಚ ಸುದೀಪ್ ಬೇಸರಗೊಂಡಿದ್ದೇಕೆ.?


ಬೆಂಗಳೂರು : ಕಿಚ್ಚ ಸುದೀಪ್ ಅಭಿನಯದ ಹೆಬ್ಬುಲಿ ಚಲನಚಿತ್ರ ರಾಜ್ಯಾದ್ಯಂತ ಅದ್ಬುತ ಪ್ರದರ್ಶನ ಕಾಣುತ್ತಿದೆ. ಕಿಚ್ಚನ ಹೆಬ್ಬುಲಿ ಆರ್ಭಟಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಈಗಾಗಲೇ ಕನ್ನಡದ ಹಳೆಯ ಚಲನಚಿತ್ರಗಳ ದಾಖಲೆಗಳನ್ನೆಲ್ಲ ಹಿಂದಿಕ್ಕಿ ಹೆಬ್ಬುಲಿ ಮುಂದಡಿಯಿಡುತ್ತಿದ್ದು ಹೆಬ್ಬುಲಿ ಇದುವರೆಗಿನ ಗಳಿಕೆ ಎಷ್ಟು ಎಂಬುದು ಎಲ್ಲರ ಕುತೂಹಲಕ್ಕೆ ಕಾರಣವಾಗಿತ್ತು. ಗಾಂಧಿನಗರದಲ್ಲಿ ಈ ಬಗ್ಗೆ ಬಿಸಿಬಿಸಿ ಚರ್ಚೆಗಳು ನಡೆಯುತ್ತಿತ್ತು. ಈಗ ಹೆಬ್ಬುಲಿ ಚಿತ್ರತಂಡ ಈ ಎಲ್ಲಾ ಕುತೂಹಲಕ್ಕೆ ತೆರೆ ಎಳೆದಿದೆ.

ಹೆಬ್ಬುಲಿ ಚಿತ್ರತಂಡ ಆಯೋಜಿಸಿದ್ದ ಸಕ್ಸಸ್ ಪ್ರೆಸ್ ಮೀಟ್ ನಲ್ಲಿ ಚಿತ್ರದ ಕಲೆಕ್ಷನ್ ಬಗ್ಗೆ ಇದ್ದ ಕುತೂಹಲಕ್ಕೆ ತೆರೆ ಎಳೆದಿದೆ. ಹೆಬ್ಬುಲಿ ಚಿತ್ರವನ್ನು ಮೈಸೂರು ಪ್ರದೇಶಗಳಲ್ಲಿ ವಿತರಣೆ ಮಾಡಿರುವ ಜಾಕ್ ಮಂಜು ಪ್ರಕಾರ ಹೆಬ್ಬುಲಿ ಸಿನಿಮಾ ಮೊದಲ ಐದು ದಿನಗಳಲ್ಲಿ 30ಕೋಟಿ ಗಳಿಸಿದೆ ಎಂದಿದ್ದಾರೆ. ಹೆಬ್ಬುಲಿ ವಿತರಕರ ಪ್ರಕಾರ ರಾಜ್ಯದ ವಲಯವಾರು ಗಳಿಕೆಯ ಲೆಕ್ಕಾಚಾರ ಇನ್ನೂ ಸಿಕ್ಕಿಲ್ಲವಾದರೂ ಮೊದಲ ಐದು ದಿನಗಳಲ್ಲಿ ಸಿನಿಮಾ 28-29ಕೋಟಿ ಗಳಿಕೆ ಮಾಡಿದೆ. ವಾರದ ಹೊತ್ತಿಗೆ ಸಿನಿಮಾ 30ಕೋಟಿ ಗಡಿ ದಾಟಲಿದ್ದು ಕನ್ನಡ ಸಿನಿಮಾಗಳ ಮಟ್ಟಿಗೆ ಇದು ದಾಖಲೆಯ ಗಳಿಕೆಯಾಗಿದೆ ಎಂದು ವಿತರಕ ಜಾಕ್ ಮಂಜು ಹೇಳಿದರು. ಹೆಬ್ಬುಲಿ ಸಿನಿಮಾವನ್ನು ರಾಜ್ಯಾದ್ಯಂತ ನಾಲ್ಕು ಜನ ವಿತರಣೆ ಮಾಡಿದ್ದಾರೆ, ಹೊರ ರಾಜ್ಯದ 26ಕ್ಕೂ ಹೆಚ್ಚು ಸಿನಿಮಾ ಮಂದಿರಗಲ್ಲಿ ಸಿನಿಮಾ ಬಿಡುಗಡೆಯಾಗಿದೆ. ಸಿನಿಮಾದ ಗಳಿಕೆಯ ಸ್ಪಷ್ಟ ಚಿತ್ರಣ ವಾರಾಂತ್ಯದಲ್ಲಿ ಸಿಗಲಿದೆ.

ಹೆಬ್ಬುಲಿ ಸಿನಿಮಾ ಮೊದಲ ದಿನವೇ 10ಕೋಟಿ ಗಳಿಸಿದ್ದರೆ , ಮೊದಲ ಮೂರು ದಿನಗಲ್ಲಿ 20ಕೋಟಿ ಗಳಿಸಿತ್ತು. ಹೆಬ್ಬುಲಿ ಸಿನಿಮಾ ಎಲ್ಲಾ ದಾಖಲೆಗಳನ್ನು ಸರಿಗಟ್ಟುತ್ತಿದ್ದರು ಕಿಚ್ಚ ಸುದೀಪ್ ಕಲೆಕ್ಷನ್ ಸಂಸ್ಕೃತಿಯ ವಿರುದ್ಧ ಧ್ವನಿ ಎತ್ತಿದ್ದಾರೆ. ಕಲೆಕ್ಷನ್ ಸಂಸ್ಕೃತಿಯ ಬಗ್ಗೆ ಬೇಸರ ವ್ಯಕ್ತಪಡಿಸಿದ ಸುದೀಪ್ ಕಲೆಕ್ಷನ್ ಬಗ್ಗೆ ಪ್ರಕಟಿಸೋದು ಒಂದು ನಾವು ಬೇರೊಬ್ಬರಿಗಿಂತ ಜಾಸ್ತಿ ಗಳಿಸಿದ್ದೇವೆ ಅಂತ ತೋರಿಸೋಕೆ, ಎರಡನೆಯದು ಬೇರೆಯವರನ್ನು ನಂಬಿಸೋಕೆ. ಈ ಎರಡೂ ನಮಗೆ ಬೇಡ, ಈ ವಾರ ನಮ್ಮದು ಜಾಸ್ತಿ ಗಳಿಸಿದ್ದರೆ ಮುಂದಿನ ವಾರ ಬೇರೊಬ್ಬರದ್ದು ಜಾಸ್ತಿ ಗಳಿಸಬಹುದು. ಇದು ನಮಗೆ ಬೇಡ. ಚಲನಚಿತ್ರವನ್ನು ಮನರಂಜನೆಯಾಗಿ ಮಾತ್ರ ನೋಡೋಣ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

loading...

No comments