Breaking News

ಡಬ್ಬಿಂಗ್ ಸಿನಿಮಾ ಬಿಡುಗಡೆ ಮಾಡಿದರೆ ಚಿತ್ರ ಮಂದಿರಗಳಿಗೆ ಬೆಂಕಿ ಹಚ್ಚುತ್ತೇನೆ


ಬೆಂಗಳೂರು : ಡಬ್ಬಿಂಗ್ ವಿರುದ್ಧ ಕನ್ನಡ ಚಿತ್ರೋದ್ಯಮ ಮತ್ತೊಮ್ಮೆ ಸಿಡಿದೇಳುವ ಲಕ್ಷಣಗಳು ಕಾಣಿಸುತ್ತಿದೆ. ಕನ್ನಡ ಹೆಸರಾಂತ ಚಿತ್ರನಟ ಜಗ್ಗೇಶ್ ಡಬ್ಬಿಂಗ್ ವಿರುದ್ಧ ಬಹಿರಂಗವಾಗಿ ಕಿಡಿಕಾರಿದ್ದಾರೆ. ಒಂದು ವೇಳೆ ಡಬ್ಬಿಂಗ್ ಸಿನಿಮಾ ಬಿಡುಗಡೆಯಾದರೆ ಸುಮ್ಮನೆ ಕೂರೋದಿಲ್ಲ. ಜೈಲಿಗೆ ಹೋದರೂ ಪರವಾಗಿಲ್ಲ ಡಬ್ಬಂಗ್ ಚಿತ್ರ ಪ್ರದರ್ಶಿಸುವ ಚಿತ್ರಮಂದಿರಗಳಿಗೆ ಬೆಂಕಿ ಹಚ್ಚುವುದಾಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಾದ್ಯಂತ ಪರಭಾಷಾ ಚಿತ್ರಗಳು ಪ್ರದರ್ಶನ ಕಾಣುತ್ತೇ ಅದೇ ತಮಿಳುನಾಡಿನಲ್ಲಿ 17-18ಲಕ್ಷ ಕನ್ನಡಿಗರು ನೆಲೆಸಿದ್ದರು ಅಲ್ಲಿ ಕನ್ನಡ ಸಿನಿಮಾಗಳು ಬಿಡುಗಡೆಯಾಗಲ್ಲ. ಹೊರ ರಾಜ್ಯಗಳಲ್ಲಿ ಮಾತೃ ಭಾಷೆಯ ಚಿತ್ರಗಳಿಗೆ ಹೆಚ್ಚು ಪ್ರಾದ್ಯಾನ್ಯತೆ ನೀಡುತ್ತಾರೆಯೇ ಹೊರತು ಬೇರೆ ಭಾಷೆಯ ಚಿತ್ರಗಳಿಗೆ ಆದ್ಯತೆಯಿರುವುದಿಲ್ಲ. ಆದರೆ ಕರ್ನಾಟಕದಲ್ಲಿ ಪರಭಾಷಾ ಚಿತ್ರಗಳೇ ಪ್ರದರ್ಶನ ಕಾಣುತ್ತೇವೆ, ಇದು ನಮ್ಮ ಕರ್ನಾಟಕದ ಚಿತ್ರರಂಗದ ದುಸ್ಥಿತಿಗೆ ಕಾರಣ ಎಂದರು.

ಒಂದು ಬಾರಿ ಡಬ್ಬಿಂಗ್ ಸಂಸ್ಕೃತಿ ಕರ್ನಾಟಕಕ್ಕೆ ಕಾಲಿಟ್ಟರೆ ಮುಂದೆ ಚಾನಲ್ ಗಳಲ್ಲಿಯೂ ಆ ಚಲನಚಿತ್ರಗಳು ಪ್ರಸಾರವಾಗುತ್ತೆ. ಡಬ್ಬಿಂಗ್ ಗಾಗಿ ವ್ಯವಸ್ಥಿತವಾಗಿ ಪಿತೂರಿ ನಡೆಯುತ್ತಿದ್ದು ಯಾವುದೇ ಕಾರಣಕ್ಕೂ ಡಬ್ಬಿಂಗ್ ಚಿತ್ರ ಕರ್ನಾಟಕಕ್ಕೆ ಕಾಲಿಡಲು ಬಿಡುವುದಿಲ್ಲ ಎಂದರು. ರಂಗಾಯಣ ರಘು, ಎಂ ಎಸ್ ರಮೇಶ್ ಹಾಗೂ ವಾಟಾಳ್ ನಾಗರಾಜ್ ಕೂಡ ಡಬ್ಬಿಂಗ್ ವಿರುದ್ಧ ತಮ್ಮ ಆಕ್ರೋಷ ವ್ಯಕ್ತಪಡಿಸಿದರು.

ಈಗಾಗಲೇ ತಮಿಳಿನಿಂದ ಕನ್ನಡಕ್ಕೆ ಡಬ್ ಆಗಿರುವ ತಮಿಳು ನಟ ಅಜಿತ್ ನಟಿಸಿರುವ ಎನ್ನೈ ಅರಿಂದಾಳ್ ಚಿತ್ರ ಇದೇ ಮಾರ್ಚ್ 3ರಂದು ರಾಜ್ಯಾದ್ಯಂತ 60 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಕನ್ನಡದಲ್ಲಿ ಈ ಸಿನಿಮಾವೇ ಸತ್ಯದೇವ ಐಪಿಎಸ್ ಎಂದು ಹೆಸರಿಡಲಾಗಿದೆ.

loading...

No comments