Breaking News

ವೈದರ ಯಡವಟ್ಟಿನಿಂದಾಗಿ ಸಜೀವ ದಹನವಾದಳೇ ಯುವತಿ


ಉತ್ತರಪ್ರದೇಶ : ವೈದ್ಯರ ಯಡವಟ್ಟಿನಿಂದಾಗಿ ಯುವತಿಯೊಬ್ಬಳು ಸಜೀವ ದಹನವಾದ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಫೆಬ್ರವರಿ 23ರಂದು ಬೆಳಗ್ಗೆ 8ಗಂಟೆ ಸುಮಾರಿಗೆ 24ವರ್ಷ ಪ್ರಾಯದ ರಚನಾಳನ್ನು ಹೊಟ್ಟೆನೋವು, ಉಸಿರಾಟದ ತೊದರೆ, ಚಳಿ ಜ್ವರ ಮುಂತಾದ ಕಾಯಿಲೆಗೆ ಚಿಕಿತ್ಸೆಗಾಗಿ ಗ್ರೇಟರ್ ನೋಯಿಡಾದಲ್ಲಿರುವ ಶ್ರದ್ದಾ ಆಸ್ಪತ್ರೆಗೆ ಗಂಡನ ಸೇರಿಸಿದ್ದರು. ಆದರೆ ಯುವತಿ ಫೆಬ್ರವರಿ 25 ರಾತ್ರಿ 11.45. ಶ್ವಾಸಕೋಶದ ಸೋಂಕಿನಿಂದಾಗಿ ಮೃತಪಟ್ಟಿರೋದಾಗಿ ವೈದ್ಯರು ಪತಿ ದೇವೇಶ್ ಚೌದರಿಗೆ ವಿಷಯ ತಿಳಿಸಿದ್ದಾರೆ.

ಫೆಬ್ರವರಿ 26 ಬೆಳಗ್ಗಿನ ಜಾವ 1.25ರ ಸುಮಾರಿಗೆ ರಚನಾಳ ಮೃತದೇಹವನ್ನು ಆಕೆಯ ಪತಿಗೆ ಆಸ್ಪತ್ರೆ ಹಸ್ತಾಂತರಿಸಿದೆ. ಮೃತದೇಹವನ್ನು ಆಲಿಘಡಕ್ಕೆ ತಂದ ಪತಿ ಬೆಳಗ್ಗೆ 8ಘಂಟೆ ವೇಳೆಗೆ ಅಂತ್ಯಸಂಸ್ಕಾರ ನೆರವೇರಿಸಿದ್ದಾನೆ. ಆದರೆ ಮೃತಳ ಸೋದರ ರಚನಾಳ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದು ಪೋಲೀಸರನ್ನು ಸ್ಥಳಕ್ಕೆ ಕರೆಸಿ ಸುಡುತ್ತಿದ್ದ ಮೃತದೇಹವನ್ನು ಹೊರತೆಗೆದು ಮರು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಮೃತದೇಹ ಅದಾಗಲೇ ಶೇಕಡಾ 70ರಷ್ಟು ಸುಟ್ಟು ಹೋಗಿತ್ತು.

ಎರಡನೇ ಬಾರಿ ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ಸಾವು ಶ್ವಾಸಕೋಶ ಸೋಂಕಿನಿಂದಲ್ಲ, ಸಜೀವ ದಹನವಾಗುವಾಗ ಆದ ಆಘಾತದಿಂದ ಸಂಭವಿಸಿದೆ ಎಂದು ಮರಣೋತ್ತರ ಪರೀಕ್ಷಾ ವರದಿಯಲ್ಲಿ ಉಲ್ಲೇಖಿಸಿದ್ದಾರೆ. ನಂತರ ಯುವತಿಯ ಸಂಬಂಧಿಕರು ಆಕೆಯ ಪತಿ ಹಾಗೂ ಕುಟುಂಬದ 10 ಸದಸ್ಯರ ವಿರುದ್ಧ ಅತ್ಯಾಚಾರ ಮಾಡಿ ಯುವತಿಯನ್ನು ಹತ್ಯೆ ಮಾಡಿದ್ದಾರೆ ಎಂದು ದೂರು ದಾಖಲಿಸಿದ್ದಾರೆ.

ಈಗ ಆರೋಪಿಗಳೆಲ್ಲಾ ತಲೆಮರೆಸಿಕೊಂಡಿದ್ದು ಉತ್ತರಪ್ರದೇಶ ಪೋಲೀಸರು ಅರೋಪಿಗಳ ಬಂಧನಕ್ಕೆ ಬಲೆ ನೀಡಿದ್ದಾರೆ. ಯುವತಿ ಮೃತಪಟ್ಟಿದ್ದಾಗಿ ವರದಿ ನೀಡಿದ್ದ ಶ್ರದ್ದಾ ಆಸ್ಪತ್ರೆ ವೈದ್ಯರು ಈಗಲೂ ಆಕೆ ಶ್ವಾಸಕೋಶದ ಸೋಂಕಿನಿಂದಾಗಿಯೇ ಮೃತಪಟ್ಟಿರೋದಾಗಿ ವಾದಿಸುತ್ತಿದ್ದಾರೆ. ಯುವತಿ ಎರಡು ವರ್ಷದ ಹಿಂದೆ ಮನೆ ಬಿಟ್ಟು ಬಂದು ಪ್ರೇಮ ವಿವಾಹವಾಗಿದ್ದಳು

loading...

No comments