Breaking News

ಚಾಲಕನಿಗೆ ಹೃದಯಾಘಾತ ಮನೆಗೆ ನುಗ್ಗಿದ ಮಿನಿ ಬಸ್



ಹೆಬ್ರಿ : ಆಗುಂಬೆ ಸಮೀಪದ ಗುಡ್ಡೆಕೇರಿಯಲ್ಲಿ ಶಿವಮೊಗ್ಗ ಕಡೆ ಚಲಿಸುತ್ತಿದ್ದ ಮಿನಿ ಬಸ್ ನ ಚಾಲಕ ಹೃದಯಾಘಾತಕ್ಕೊಳಗಾದ ಪರಿಣಾಮ ಬಸ್ ನಿಯಂತ್ರಣ ತಪ್ಪಿ ಮನೆಯೊಂದಕ್ಕೆ ನುಗ್ಗಿದ ಘಟನೆ ನಿನ್ನೆ ನಡೆದಿದೆ.
ಘಟನೆಯಲ್ಲಿ ಬಸ್ ಚಾಲಕ ತೀರ್ಥಹಳ್ಳಿ ಕಟ್ಟೆಹಕ್ಲುವಿನ ಶ್ರೀಕಂಠ (೫೦) ಮೃತಪಟ್ಟಿದ್ದಾರೆ.
ಚಾಲಕನಿಗೆ ಎದೆನೋವು ಕಾಣಿಸಿಕೊಂಡ ವೇಳೆ ಬಸ್ ನಿಯಂತ್ರಣ ತಪ್ಪಿ ಇಳಿಜಾರಿನಲ್ಲಿ ರಸ್ತೆಯ ಬದಿಯಲ್ಲೇ ಇದ್ದ ಮನೆಗೆ ನುಗ್ಗಿ ಜಖಂಗೊಂಡಿತು ಎಂದು ಬಸ್ ನಲ್ಲಿದ್ದ ಪ್ರಯಾಣಿಕರು ತಿಳಿಸಿದ್ದಾರೆ. ಬಸ್ ನಲ್ಲಿದ್ದ ೧೫ ಪ್ರಯಾಣಿಕರು ಗಾಯಗೊಂಡಿದ್ದು, ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇಬ್ಬರ ಸ್ಥಿತಿ ಗಂಭೀರವಾಗಿದ್ದು, ಮಣಿಪಾಲದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

loading...

No comments