Breaking News

ಹೆಬ್ರಿ ತಾಲೂಕು ಕೈಬಿಟ್ಟ ಹಿನ್ನಲೆ ಸ್ಥಳೀಯ ಕಾಂಗ್ರೆಸ್ ನಾಯಕರ ರಾಜೀನಾಮೆ


ಕಾರ್ಕಳ : ಕಳೆದ ಹಲವು ದಶಕಗಳ ಬೇಡಿಕೆಯಾಗಿದ್ದ ಹೆಬ್ರಿ ತಾಲೂಕು ರಚನೆಗೆ ರಾಜ್ಯ ಸರಕಾರದಿಂದ ಮತ್ತೆ ಹಿನ್ನಡೆಯಾಗಿದ್ದು, ಈ ಹಿನ್ನಲೆಯಲ್ಲಿ ತಾಲೂಕು ಹೋರಾಟ ಸಮಿತಿಯಲ್ಲಿ ಮುಂಚೂಣಿಯಲ್ಲಿದ್ದ ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನೀರೆ ಕೃಷ್ಣ ಶೆಟ್ಟಿ ಹಾಗೂ ಪ್ರಧಾನ ಕಾರ್ಯದರ್ಶಿ ನವೀನ್ ಅಡ್ಯಂತಾಯ ಹಾಗೂ ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳು ಕಾಂಗ್ರೆಸ್ ಸರಕಾರದ ನಿರ್ಧಾರಕ್ಕೆ ಬೇಸತ್ತು ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ.

ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ ಅಧಿಕಾರದಲ್ಲಿದ್ದುಕೊಂಡು ಹೆಬ್ರಿ ತಾಲೂಕು ರಚನೆಯ ಬೇಡಿಕೆಯನ್ನು ತಿರಸ್ಕರಿಸಿರುವುದು ದುರಂತ. ಕಳೆದ ಹಲವು ದಶಕಗಳಿಂದ ಹೆಬ್ರಿ ಭಾಗದ ಜನರ ಬೇಡಿಕೆಯಾಗಿದ್ದ ತಾಲೂಕು ರಚನೆಯ ಕನಸಿಗೆ ಕಾಂಗ್ರೆಸ್ ಸರಕಾರ ಎಳ್ಳುನೀರು ಬಿಟ್ಟಿರುವುದು ಖಂಡನೀಯ. ಜಿಲ್ಲಾ ಕೇಂದ್ರವಾದ ಉಡುಪಿ ಹಾಗೂ ತಾಲೂಕು ಕೇಂದ್ರವಾದ ಕಾರ್ಕಳಕ್ಕೆ ಒಂದೇ ದೂರವಿದ್ದು, ಹೆಬ್ರಿಯನ್ನು ಅಂದೇ ತಾಲೂಕನ್ನಾಗಿ ಘೋಷಣೆ ಮಾಡಬಹುದಿತ್ತು. ಆದರೆ ಜನಪ್ರತಿನಿಧಿಗಳಲ್ಲಿನ ಇಚ್ಚಾಶಕ್ತಿ ಕೊರತೆ ಹಾಗೂ ಸಕಾರಾತ್ಮಕ ಹೋರಾಟಗಳು ನಡೆಯದ ಹಿನ್ನೆಲೆಯಲ್ಲಿ ಹೆಬ್ರಿ ತಾಲೂಕು ರಚನೆಗೆ ಹಿನ್ನಡೆಯಾಗಿದೆ. ತಾನು ಹೆಬ್ರಿ ತಾಲೂಕು ಹೋರಾಟ ಸಮಿತಿಯಲ್ಲಿ ಮುಂಚೂಣಿಯಲ್ಲಿದ್ದು, ಹೋರಾಟ ನಡೆಸಿರುವುದರಿಂದ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವುದಾಗಿ ನೀರೆ ಕೃಷ್ಣ ಶೆಟ್ಟಿ ಹೇಳಿದ್ದಾರೆ.

k-ale

loading...

No comments