Breaking News

ಉಳ್ಳಾಲದಲ್ಲಿ ಕೆಲಸ ಕೊಡಿಸುವ ನೆಪದಲ್ಲಿ ಹೆಣ್ಮಕ್ಕಳ ಮಾರಾಟ ಜಾಲ ?




ಉಳ್ಳಾಲ ಮೂಲದ ಕಾಣದ ಕೈಗಳ ಕೈವಾಡ ಶಂಕೆ
ಉ.ಕ.ದ ಐವರು ಯುವತಿಯರ ನಾಪತ್ತೆ ಪ್ರಕರಣ

ಮಂಗಳೂರು: ಉತ್ತರ ಕನ್ನಡ ಮೂಲದ ಐವರು ಯುವತಿಯರು ನಿಗೂಢವಾಗಿ ನಾಪತ್ತೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿ ಹೆತ್ತವರು, ಪೋಷಕರು ಉಳ್ಳಾಲ ಠಾಣೆಯಲ್ಲಿ ದೂರು ದಾಖಲಿಸಿ ಘಟನೆ ವರದಿ ಆಗಿದೆ  ಇಂದು ಮುಂಜಾನೆ ಠಾಣೆಗೆ ಬಂದಿದ್ದ ಹೆಣ್ಮಕ್ಕಳ ಪೋಷಕರು ಯುವತಿಯರ ನಾಪತ್ತೆ ಹಿಂದೆ ಉಳ್ಳಾಲ ಮೂಲದ ಕಾಣದ ಕೈಗಳ ಕೈವಾಡವಿದೆ ಎಂದು ಆರೋಪಿಸಿದ್ದಾರೆ.

ಕೆಲಸ ಕೊಡಿಸುವ ನೆಪದಲ್ಲಿ ಯುವತಿಯವರನ್ನು ಮಾರಾಟ ಮಾಡಿರುವ ಶಂಕೆ ಎದುರಾಗಿದ್ದು, ಉತ್ತರ ಕನ್ನಡದ ಗೌಳಿ ಸಮುದಾಯಕ್ಕೆ ಸೇರಿದ ಐವರು ಯುವತಿಯರು ಉಳ್ಳಾಲದಲ್ಲಿರುವ ‘ಕೈಕೋ’ ಕಂಪೆನಿಯಲ್ಲಿ ಕೆಲಸಕ್ಕೆಂದು ಮನೆ ತೊರೆದು ಬಂದಿದ್ದರು ಎನ್ನಲಾಗಿದೆ. ಯುವತಿಯರನ್ನು ಕಂಪೆನಿ ಕೆಲಸಕ್ಕೆ ಸುನೀತ ಬಿಜಕಲೆ ಎಂಬಾಕೆ ಕರೆದುಕೊಂಡು ಹೋಗಿದ್ದಳು ಎನ್ನಲಾಗಿದೆ. ತನ್ನನ್ನು ತಾನು ಕೈಕೋ ಕಂಪೆನಿ ಏಜೆಂಟ್ ಎಂದು ಪರಿಚಯ ಮಾಡಿಕೊಂಡಿದ್ದ ಸುನೀತ ದೊಂಡಿಬಾಯಿ ಹಾಗೂ ಇತರ ನಾಲ್ವರನ್ನು ಕೆಲಸ ಕೊಡಿಸುವುದಾಗಿ ನಂಬಿಸಿ ಉಳ್ಳಾಲಕ್ಕೆ ಕರೆದೊಯ್ದಿದ್ದಳು ಎಂದು ದೂರಲಾಗಿದೆ.
ಈ ಎಲ್ಲಾ ಬೆಳವಣಿಗೆಯಿಂದ ಉಳ್ಳಾಲ ಸುತ್ತಮುತ್ತ ಹೆಣ್ಮಕ್ಕಳ ಮಾರಾಟ ಜಾಲ ಕಾರ್ಯಾಚರಿಸುತ್ತಿದೆಯೇ ಎಂಬ ಶಂಕೆ ಎದ್ದಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


loading...

No comments