Breaking News

ಮಾನವೀಯತೆ ಮೆರೆದ ಹೈವೇ ಪ್ಯಾಟ್ರೋಲಿಂಗ್ ಪೊಲೀಸ್



ಮಂಗಳೂರು : ರಾತ್ರಿ ಗಸ್ತು ನಿರತವಾಗಿದ್ದ ಸಂದರ್ಭದಲ್ಲಿ  ಎದೆನೋವಿನಿಂದ ಬಳಲುತ್ತಿದ್ದ ರೋಗಿಯನ್ನು ಆಸ್ಪತ್ರೆಗೆ ಕರೆದೊಯ್ದ ಪೊಲೀಸರು ಮಾನವೀಯತೆ ಮೆರೆದ ಘಟನೆ ನಗರದಲ್ಲಿ ನಡೆದಿದೆ.

ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಬೆಳ್ಳಂಬೆಳಗ್ಗೆ ಪ್ಯಾಟ್ರೋಲಿಂಗ್ ಮಾಡುತ್ತಿದ್ದ ಕಾವೂರು ಠಾಣಾ ಸಬ್ ಇನಸ್ಪೆಕ್ಟರ್ ಉಮೇಶ್ ಅವರು ತಮ್ಮ ವಾಹನದಲ್ಲಿ ಎದೆನೋವಿನಿಂದ ಬಳಲುತ್ತಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲು ನೆರವಾಗುವ ಮೂಲಕ ಎಲ್ಲರ ಶ್ಲಾಘನೆಗೆ ಪಾತ್ರವಾಗಿದ್ದಾರೆ.

ಮೂಲತಃ ಕಾರವಾರ ನಿವಾಸಿ, ಪ್ರಸ್ತುತ ಮಂಗಳೂರಿನಲ್ಲಿ ವಾಸವಾಗಿರುವ ದೀಪಕ್

ಶಾಂತಾರಾಮ್ ವಾರಿಕ್ ಅವರು ಇಲ್ಲಿನ ಆಕ್ಸಫರ್ಡ್ ಗ್ಲೋಬಲ್ ಶಾಲೆಯಲ್ಲಿ ಆನ್ಲೈನ್ ಟೀಚರ್ ಆಗಿದ್ದಾರೆ. ಮಾ 15ರಂದು ಮನೆಗೆ ತೆರಳಿದ ವೇಳೆ ಅವರಿಗೆ ಎದೆನೋವು ಕಾಣಿಸಿಕೊಂಡಿತ್ತು. ರಾತ್ರಿ 2.45ಕ್ಕೆ ನೋವು ತೀವ್ರಗೊಂಡಿದೆ. ಕೂಡಲೇ ಇವರ ಪತ್ನಿ ಶ್ರಾವಣಿ ಅವರು ಆಸ್ಪತ್ರೆಗೆ ಕರೆದೊಯ್ಯಲು ಯತ್ನಿಸಿದ್ದಾರೆ. ಹಲವರಲ್ಲಿ ಡ್ರಾಪ್ ಕೊಡಿ ಎಂದರೂ ಯಾರೂ ವಾಹನ ನಿಲ್ಲಿಸಲಿಲ್ಲ. ಕೊನೆಗೆ ಅದೇ ದಾರಿಯಾಗಿ ಬರುತ್ತಿದ್ದ ಪ್ಯಾಟ್ರೋಲಿಂಗ್ ವಾಹನದಲ್ಲಿದ್ದ ಎಸೈ ಉಮೇಶ್ ದೀಪಕ್ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಕಳೆದ ವಾರ ಮುಡಿಪು ಬಳಿ ರಾತ್ರಿ ವೇಳೆ ಮನೆಗೆ ತೆರಳಲು ವಾಹನ ಸಿಗದೇ ಬಸ್ ನಿಲ್ದಾಣದಲ್ಲಿದ್ದ ಮಹಿಳೆಯನ್ನು ಮನೆಗೆ ತಲುಪಿಸಿ ಪೊಲೀಸರು ಎಲ್ಲರ ಶ್ಲಾಘನೆಗೆ ಪಾತ್ರರಾಗಿದ್ದರು. ರಾತ್ರಿ ಗಸ್ತು ನಿರತ ಪ್ಯಾಟ್ರೋಲಿಂಗ್ ವಾಹನಗಳು ಈ ರೀತಿ ಸಾರ್ವಜನಿಕರಿಗೆ ನೆರವು ನೀಡುತ್ತಿರುವುದು ಸಾರ್ವಜನಿಕರಲ್ಲಿ ನೆಮ್ಮದಿ ಮೂಡಿಸಿದೆ

loading...

No comments