Breaking News

ಯೋಗಿ ಕಟ್ಟಪ್ಪಣೆ : 300 ಕಸಾಯಿಖಾನೆಗಳಿಗೆ ಬೀಗಉತ್ತರ ಪ್ರದೇಶ : ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರ ಅಕ್ರಮ ಕಸಾಯಿಖಾನೆ ಮುಚ್ಚುವ ಕಾರ್ಯಾಚರಣೆ ತೀವ್ರಗೊಳಿಸಿದ್ದು, ಇದುವರೆಗೆ 300ಕ್ಕೂ ಅಧಿಕ ಅಕ್ರಮ ಕಸಾಯಿಖಾನೆಗಳಿಗೆ ಬೀಗಜಡಿಯಲಾಗಿದೆ.
ಅಧಿಕಾರಿಗಳು ರಾಜ್ಯಾದ್ಯಂತ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದಾರೆ.   ತಪಾಸಣೆ ವೇಲೆ ಅಕ್ರಮಗಳು ಕಂಡು ಬಂದ ಹಿನ್ನೆಲೆಯಲ್ಲಿ ಶಾಮ್ಲಿ ಜಿಲ್ಲೆಯ ಕೈರಾನಾ ಪಟ್ಟಣದ ಬೃಹತ್ ಮಾಂಸ ಸಂಸ್ಕರಣೆ ಘಟಕಕ್ಕೆ ಅಧಿಕಾರಿಗಳು ಬೀಗ ಜಡಿಸಿದ್ದಾರೆ. ಮೀಮ್ ಆಗ್ರೋ ಫುಡ್ಸ್ ಪ್ರೈವೇಟ್ ಲಿಮಿಟೆಡ್‍ಗೆ ನಿನ್ನೆ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ವಿಜಯ್ ಪ್ರಕಾಶ್ ನೇತೃತ್ವದ ಅಧಿಕಾರಿಗಳು ಹಠಾತ್ ಭೇಟಿ ನೀಡಿ ಪರಿಶೀಲಿಸಿದರು.

ಅಲ್ಲಿ ಭಾರೀ ಅಕ್ರಮಗಳು ಕಂಡು ಬಂದ ಹಿನ್ನೆಲೆಯಲ್ಲಿ ಘಟಕಕ್ಕೆ ಬೀಗಮುದ್ರೆ ಹಾಕಲಾಗಿದೆ. ಅಲ್ಲದೇ ಠಾಣಾ ಭವನ್, ಜಲಾಲಾಬಾದ್ ಮತ್ತು ಶಾಮ್ಲಿ ಜಿಲ್ಲೆಗಳ ವಿವಿಧೆಡೆ ಪರವಾನಗಿ ಇಲ್ಲದೇ ನಡೆಸಲಾಗುತ್ತಿದ್ದ  300 ಕ್ಕೂ ಹೆಚ್ಚು  ಅನಧಿಕೃತ ಮಾಂಸದಂಗಡಿಗಳನ್ನು ಬಂದ್ ಮಾಡಲಾಗಿದೆ.
loading...

No comments