Breaking News

ವಾಟ್ಸಪ್ ಮೂಲಕ 'ತಲಾಕ್' ನೀಡಿದ ಪತಿಯ ವಿರುದ್ದ ನ್ಯಾಯಾಲಯದ ಮೆಟ್ಟಿಲೇರಿದ ಸಂತ್ರಸ್ತ ಮಹಿಳೆ




​ನವದೆಹಲಿ : ಸಮಾನ ನಾಗರೀಕ ಸಂಹಿತೆ ಪರ ವಾದ ವಿವಾದಗಳು ನಡೆಯುತ್ತಿರುವ ಬೆನ್ನಲ್ಲೇ ದೆಹಲಿಯಲ್ಲಿ ಮುಸ್ಲಿಂ ಮಹಿಳೆಯೋರ್ವರು ತನ್ನ ಪತಿ ತನಗೆ ವಾಟ್ಸಾಪ್ ಮೂಲಕ ನೀಡಿದ್ದಾನೆ ಎಂದು ನ್ಯಾಯಕ್ಕಾಗಿ ಕೋರ್ಟ್ ಮೊರೆ ಹೋಗಿದ್ದಾಳೆ. ನವ ದೆಹಲಿಯ ನಿವಾಸಿ 28ರ ಹರೆಯದ ಮಹಿಳೆಗೆ ಆರು ವರ್ಷದ ಹಿಂದೆ ಕುಟುಂಬಸ್ತರು ಆರಿಸಿದ ಯುವಕನೊಂದಿಗೆ ಮದುವೆಯಾಗಿತ್ತು.

ಮದುವೆಯಾದ ಪ್ರಾರಂಭದಲ್ಲಿ ಅನ್ಯೋನ್ಯವಾಗಿದ್ದ ಗಂಡ ದಿನಕಳೆದಂತೆ ವರದಕ್ಷಿಣೆ ದುಡ್ಡಿಗಾಗಿ ಮಾನಸಿಕವಾಗಿ, ದೈಹಿಕವಾಗಿ ಹಿಂಸೆ ನೀಡುತ್ತಿದ್ದ, ಮಗಳು ಹುಟ್ಟಿದ ಬಳಿಕ ಇದು ವಿಕೋಪಕ್ಕೆ ತಿರುಗಿದ್ದು ಪತಿ ನನ್ನ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸುತ್ತಿದ್ದ , ನಂತರ ನನ್ನಿಂದ ಬೇರ್ಪಟ್ಟು ದೂರವಾಗಿದ್ದ.

ಇದೀಗ ಮಹಿಳೆಗೆ ಗಂಡ ವಾಟ್ಸಪ್ ಮೂಲಕ ಮೂರು ಬಾರಿ 'ತಲಾಕ್' ಎಂದು ಸಂದೇಶ ಕಳುಹಿಸಿ ನಿನ್ನಿಂದ ವಿಚ್ಛೇದನೆಯನ್ನು ಪಡೆದಿರುವುದಾಗಿ ಹೇಳಿದ್ದಾನೆ. ನೊಂದಿರುವ ಮಹಿಳೆ ನ್ಯಾಯಾಲಯದಲ್ಲಿ ತನಗೆ ನ್ಯಾಯ ದೊರಕಿಸಿ ಕೊಡಿ ಎಂದು ದೂರು ನೀಡಿದ್ದಾಳೆ.ಮಗಳ ಮೇಲೆ ಇಷ್ಟೊಂದು ಅನ್ಯಾಯವಾಗುತ್ತಿದ್ದರೆ ಸಂತ್ರಸ್ಥೆಯ ತಂದೆ ನ್ಯಾಯಾಲಯದ ಮೊರೆ ಹೋಗುವುದೋ ಅಥವಾ ಹಿಂದಿನಿಂದ ನಡೆದುಕೊಂಡು ಬಂದಿರುವ ಮುಸ್ಲಿಂ ಧಾರ್ಮಿಕ ಪರಂಪರೆಯನ್ನು ಬೆಂಬಲಿಸುವುದೋ ಎಂಬ ಗೊಂದಲದಲ್ಲಿದ್ದಾರೆ.
loading...

No comments