Breaking News

ಈ ಗ್ರಾಮದ ಕ್ಷೌರಿಕರಿಗೆ ದಲಿತರೆಂದರೆ ಅಲರ್ಜಿ

file photo


​ಬೆಂಗಳೂರು : ರಾಜಧಾನಿಯಿಂದ ಕೇವಲ 60 ಕಿ ಮೀ ದೂರದಲ್ಲಿರುವ ಚಿಕ್ಕಬಳ್ಳಾಪುರ ಜಿಲ್ಲೆಯ ಮಂಚನಬಾಳೆ ಎಂಬ ಗ್ರಾಮದಲ್ಲಿ ಅಸ್ಪರ್ಶ್ಯತೆಯ  ಅನಿಷ್ಟ ಪದ್ಧತಿಯು ಈಗಲೂ ಚಾಲ್ತಿಯಲ್ಲಿದೆ. ಈ ಗ್ರಾಮದ ದಲಿತರಿಗೆ ಅಲ್ಲಿನ ಕ್ಷೌರದಂಗಡಿಗಳಿಗೆ ಪ್ರವೇಶವಿಲ್ಲ. ಕಳೆದೊಂದು ವರ್ಷದಿಂದ ದಲಿತರ ಮೇಲೆ ಈ ಕಟ್ಟಳೆ ವಿಧಿಸಿದಂದಿನಿಂದ ಗ್ರಾಮದಲ್ಲಿರುವ ಎಲ್ಲಾ ಮೂರು  ಕ್ಷೌರದಂಗಡಿಗಳೂ ಮುಚ್ಚಿವೆ. ಮೇಲ್ಜಾತಿಗೆ ಸೇರಿದ ಯಾರಿಗಾದರೂ ಕೂದಲು ಕತ್ತರಿಸಲಿಕ್ಕಿದ್ದರೆ ಕ್ಷೌರಿಕರು ಅವರ ಮನೆಗೇ ಹೋಗಿ ತಮ್ಮ ಕೆಲಸ ನಿರ್ವಹಿಸುತ್ತಾರೆ ಎಂದು ದಲಿತರು ಹೇಳುತ್ತಾರೆ.

ಆಶ್ಚರ್ಯವೇನೆಂದರೆ ಜಿಲ್ಲಾಧಿಕಾರಿಗಳ ಕಚೇರಿಯಿಂದ ಕೇವಲ 2 ಕಿ ಮೀ ದೂರದಲ್ಲಿರುವ ಈ ಗ್ರಾಮದಲ್ಲಿ   ದಲಿತರನ್ನು ಅಸ್ಪರ್ಶ್ಯರಂತೆ ಕಾಣಲಾಗುತ್ತಿದೆ.

ಈ ಗ್ರಾಮದಲ್ಲಿ 150 ದಲಿತ ಕುಟುಂಬಗಳು ವಾಸಿಸುತ್ತಿದ್ದು ಅವರ ಜನಸಂಖ್ಯೆ ಸುಮಾರು 500ರಷ್ಟಿದೆ. ಕ್ಷೌರಕ್ಕಾಗಿ ಅವರೆಲ್ಲಾ ಜಿಲ್ಲಾ ಕೇಂದ್ರಕ್ಕೇ ಹೋಗಬೇಕು.ದಲಿತರಿಗೆ ಗ್ರಾಮದಲ್ಲಿ ಉಂಟಾಗುತ್ತಿರುವ  ಅನ್ಯಾಯದಬಗ್ಗೆ ಜಿಲ್ಲಾಡಳಿತ ಕಣ್ಣು ಮುಚ್ಚಿ ಕುಳಿತಿದೆ ಎಂದು ದಲಿತ ಸಂಘರ್ಷ ಸಮಿತಿ ಮತ್ತಿತರ ಪ್ರಗತಿಪರ ಸಂಘಟನೆಗಳು ಆರೋಪಿಸಿವೆ.“ಕ್ಷೌರಿಕರು ದಲಿತರಿಗೂ ತಮ್ಮ ಸೇವೆ ನೀಡಲು ಸಿದ್ಧರಿರುವರಾದರೂ ಅವರು ಕೆಲವರ ಬಗ್ಗೆ ಭಯ ಹೊಂದಿದ್ದಾರೆ. ರಾಜಕೀಯ ಪಕ್ಷಗಳು ಕೂಡ ಈ ಸಮಸ್ಯೆಯನ್ನು ಪರಿಹರಿಸಲು ಯತ್ನಿಸದೆ ಅದರಿಂದ ರಾಜಕೀಯ ಲಾಭ ಪಡೆಯಲು ಹವಣಿಸುತ್ತಿವೆ. ನಮ್ಮ ಹಲವಾರು ಮನವಿಗಳಿಗೆ ಅವುಗಳು ಕಿವುಡಾಗಿವೆ” ದಸಂಸ ನಾಯಕ ರಜನೀಕಾಂತ್ ಹೇಳುತ್ತಾರೆ.



loading...

No comments