Breaking News

ಆಸ್ತಿಗಾಗಿ ಒಡ ಹುಟ್ಟಿದ ಅಣ್ಣನಿಗೆ ತಮ್ಮನಿಂದ ಗುದ್ದಲಿ ಏಟು, ಅಣ್ಣ ಗಂಭೀರ

ಬೆಳ್ತಂಗಡಿ : ಆಸ್ತಿಗಾಗಿ ಒಡಹುಟ್ಟಿದವರ ಮೇಲೆ, ತಂದೆ ತಾಯಿಯ ಮೇಲೆ ಹಲ್ಲೆ, ಕೊಲೆ ಈಗೀಗ ಸಾಮಾನ್ಯವಾಗಿದೆ. ಹಣ, ಆಸ್ತಿ ಮಧ್ಯೆ ಸಂಬಂಧಕ್ಕೆ ಬೆಲೆ ಇಲ್ಲದಾಗಿದೆ. ಇದೇ ಜಾಗದ ತಕರಾರಿನಿಂದಾಗಿ ತಮ್ಮನೋರ್ವ ತನ್ನ ಸ್ವಂತ ಅಣ್ಣನ ಮೇಲೆ ಗುದ್ದಲಿಯಿಂದ ಹಲ್ಲೆ ಮಾಡಿದ್ದಾನೆ. ಬೆಳ್ತಂಗಡಿ ತಾಲೂಕಿನ ಕಳಿಯ ಗ್ರಾಮದಲ್ಲಿ ಘಟನೆ ನಡೆದಿದೆ.
ಅಸ್ತಿ ತಕರಾರಿನಲ್ಲಿ ಹುಟ್ಟಿಕೊಂಡ ದ್ವೇಷ ಸಹೋದರರ ಹೊಡೆದಾಟಕ್ಕೆ ಕಾರಣವಾಗಿದ್ದು ಕಳಿಯ ಗ್ರಾಮದ ಗೇರುಕಟ್ಟೆ ಸನಿಹದ ಬಾವೊಟ್ಟು ಎಂಬಲ್ಲಿನ ನಿವಾಸಿ ರಮೇಶ್ ಎಂಬಾತ ಜಾಗದ ತಕರಾರಿಗೆ ಸಂಬಂಧಿಸಿ ತನ್ನ ಅಣ್ಣ ನೋಣಯ್ಯ ಎಂಬುವರಿಗೆ ಬುಧವಾರ ಗುದ್ದಲಿಯಿಂದ ಹಲ್ಲೆಗೈದು ಗಾಯಗೊಳಿಸಿದ್ದಾನೆ. ಹಲ್ಲೆಯಿಂದ ಗಂಭೀರ ಗಾಯಗೊಂಡಿರುವ ನೋಣಯ್ಯ ಅವರನ್ನು  ಬೆಳ್ತಂಗಡಿಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ  ದಾಖಲಿಸಲಾಗಿದೆ. ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
loading...

No comments