ಪಿಣರಾಯಿ ವಿಜಯನ್ ತಲೆತೆಗೆದವರಿಗೆ ಒಂದು ಕೋಟಿ ಬಹುಮಾನ ಘೋಷಿಸಿದ ಆರ್.ಎಸ್.ಎಸ್ ನಾಯಕ.
ಉಜ್ಜೈನಿ : ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಉಜ್ಜೈನಿ ಪ್ರಮುಖ ಕುಂದನ್ ಚಂದ್ರಾವತ್ ಗುರುವಾರ ವಿವಾದಾಸ್ಪದ ಹೇಳಿಕೆ ನೀಡಿ ಸುದ್ದಿಯಲ್ಲಿದ್ದಾರೆ. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಲೆ ತೆಗೆಯುವವರಿಗೆ ಒಂದು ಕೋಟಿ ಬಹುಮಾನ ನೀಡೋದಾಗಿ ಹೇಳಿದ್ದಾರೆ.
ಕೇರಳದಲ್ಲಿ ಸಿಪಿಐ(ಎಮ್) ಕಾರ್ಯಕರ್ತರು ಬಿಜೆಪಿ ಹಾಗೂ ಆರ್.ಎಸ್.ಎಸ್ ಕಾರ್ಯಕರ್ತರ ಮೇಲೆ ದಾಳಿ ಮಾಡುತ್ತಿರುವ ಸಲುವಾಗಿ ಈ ಬಹುಮಾನ ಘೋಷಿಸುತ್ತಿದ್ದೇನೆ. ನನ್ನ ಬಳಿ ಒಂದು ಕೋಟಿಗೂ ಆಸ್ತಿ ಪಾಸ್ತಿ ಇದ್ದು ಪಿಣರಾಯಿ ವಿಜಯನ್ ತಲೆ ತೆಗೆದವರಿಗೆ ಅದನ್ನು ಕೊಟ್ಟು ಬಿಡುತ್ತೇನೆ ಎಂದು ಹೇಳಿಕೆ ನೀಡಿದ್ದಾರೆ.
"ಪಿಣರಾಯಿ ವಿಜಯನ್ ನಂತಹ ದ್ರೋಹಿಗಳಿಗೆ ದೇಶದಲ್ಲಿ ಬದುಕುವ ಹಕ್ಕು ಇಲ್ಲಾ ,ಪ್ರಜಾಪ್ರಭುತ್ವವನ್ನು ಹತ್ಯೆಮಾಡುವ ಹಕ್ಕೂ ಇಲ್ಲ. ಗೋದ್ರಾ ಹತ್ಯಾಕಾಂಡ ಮರೆತು ಹೋಯಿತೇ? 56 ಹಿಂದೂಗಳ ಹತ್ಯೆಯಾಗಿತ್ತು, ಪ್ರತೀಕಾರವಾಗಿ 2000ಮಸಲ್ಮಾನರನ್ನು ಕಡಿದು ಹಾಕಿದ್ದೇವೆ. ಕೇರಳದಲ್ಲಿ ನೀವು 300ಕ್ಕೂ ಅಧಿಕ ಕಾರ್ಯಕರ್ತರ ಹತ್ಯೆ ಮಾಡಿದ್ದೀರಿ. ನಾವೂ ಭಾರತ ಮಾತೆಗೆ ಮೂರು ಲಕ್ಷ ಮಾನವ ತಲೆ ಬುರುಡೆ ಧರಿಸುವಂತೆ ಮಾಡುತ್ತೇವೆ, ನೋಡ್ತಾ ಇರಿ" ಎಂದು ಉಜ್ಜೈನಿಯಲ್ಲಿ ಜನರನ್ನುದ್ದೇಶಿಸಿ ಮಾತನಾಡುವಾಗ ಹೇಳಿದ್ದಾರೆ.
ಹೇಳಿಕೆ ನಂತರ ಮಾಧ್ಯಮದೊಂದಿಗೆ ಮಾತನಾಡಿದ ಚಂದ್ರಾವತ್ " ಇದು ನನ್ನ ವೈಯಕ್ತಿಕ ಅಭಿಪ್ರಾಯ. ಭಗತ್ ಸಿಂಗ್ ಬ್ರಿಟಿಷರ ಮೇಲೆ ಬಾಂಬ್ ಧಾಳಿ ಮಾಡಿದ ಹಾಗೆ ನಾನು ಸ್ಫೋಟಕ ಹೇಳಿಕೆ ನೀಡಿದ್ದೇನೆ. ಹಿಂದೂಗಳು ಮಲಗಿಲ್ಲ ಎಂದು ಅವರಿಗೂ ತಿಳಿಯಬೇಕು" ಎಂದರು.
ಚಂದ್ರಾವತ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಪಿಣರಾಯಿ ವಿಜಯನ್ " ಆರ್.ಎಸ್.ಎಸ್ ಈಗಾಗಲೇ ಅನೇಕರ ತಲೆ ತೆಗೆದಿದೆ" ಎಂದಿದ್ದಾರೆ.
ಚಂದ್ರಾವತ್ ಹೇಳಿಕೆಯನ್ನು ಖಂಡಿಸಿದ ಸಿಪಿಐ(ಎಮ್) ನಾಯಕ ಸೀತಾರಾಮ್ ಯೆಚುರಿ "ಇದೊಂದು ಕ್ರೂರತೆಯ ಹೇಳಿಕೆ, ಒಂದು ರಾಜ್ಯದ ಮುಖ್ಯಮಂತ್ರಿಗೆ ಆರ್.ಎಸ್.ಎಸ್ ಬೆದರಿಕೆ ಹಾಕಿದೆ. ಇದು ಖಂಡನಾರ್ಹ ಹೇಳಿಕೆ, ಅವರು ಕೇಂದ್ರ ಸರ್ಕಾರದ ರಕ್ಷಣೆ ಮತ್ತು ಪ್ರಾಯೋಜಕತ್ವದಲ್ಲಿ ಆನಂದವಾಗಿರುವುದೇ ಇದಕ್ಕೆಲ್ಲ ಕಾರಣ" ಎಂದಿದ್ದಾರೆ.
loading...
No comments