ಹಾಸಿಗೆಯಿಂದಲೇ ಪಿಯು ಪರೀಕ್ಷೆ ಬರೆದ ಛಲಗಾರ ಬಾಲಕ
ಮಂಗಳೂರು : ಛಲ ಇದ್ದರೆ ಏನನ್ನೂ ಸಾಧಿಸಬಹುದು ಅನ್ನೋದಿಕ್ಕೆ ಅರ್ಜುನ್ ಉದಾಹರಣೆ. ಹುಟ್ಟಿದ ವೇಳೆ ಎಲ್ಲರಂತೆ ಚೆನ್ನಾಗಿದ್ದ ಬಾಲಕ ಇದೀಗ ಜಗತ್ತಿನಲ್ಲೇ ಅಪರೂಪದ ಅಸ್ಟೋಜೆನಿಸ್ ಫಪೇಕ್ಟ ಅನ್ನೋ ಖಾಯಿಲೆಯಿಂದ ಬಳಲುತ್ತಿದ್ದಾನೆ. ಆರು ವರ್ಷವಿದ್ದಾಗ ಈತನನ್ನು ಬಾಧಿಸಿದ ಈ ಖಾಯಿಲೆ ಆತನನ್ನು ಇದೀಗ ಹಾಸಿಗೆ ಬಿಟ್ಟೇಳದಂತೆ ಮಾಡಿದೆ. ಹೀಗಿದ್ದರೂ ಈ ಬಾಲಕ ತನ್ನ ವಿದ್ಯಾಭ್ಯಾಸವನ್ನು ಛಲದಿಂದ ಮುಂದುವರಿಸಿದ್ದಾನೆ.
ದೇಹದ ಮೇಲಿನ ಸ್ವಾಧೀನವನ್ನು ಸಂಪೂರ್ಣ ಕಳೆದುಕೊಂಡಿರುವ ಈತ ಇದೀಗ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿಯಾಗಿದ್ದು, ಸಹಾಯಕಿಯೊಬ್ಬರನ್ನು ಬಳಸಿಕೊಂಡು ಮಲಗಿಕೊಂಡು ತನ್ನ ಪಿಯುಸಿ ಪರೀಕ್ಷೆಯನ್ನು ಬರೆದಿದ್ದಾನೆ.
ಕಾಲೇಜಿನಲ್ಲಿ ಪ್ರಥಮ ಬಿಕಾಂ ವಿದ್ಯಾರ್ಥಿಯಾಗಿರೋ ಈತನ ಕಥೆ ಕೇಳಿದ್ರೆ ನಿಜಕ್ಕೂ ಕರುಣಾಜನಕ. ಎಲುಬಿನ ಸ್ವಾಧೀನವನ್ನೇ ಕಿತ್ತುಕೊಳ್ಳೋ ಈ ಕಾಯಿಲೆಯಿಂದಾಗಿ ಹುಟ್ಟಿನ ಆರು ತಿಂಗಳ ನಂತರ ಅರ್ಜುನ್ ಹಾಸಿಗೆ ಹಿಡಿದಿದ್ದಾನೆ. ತಂದೆ ಭಗವಾನ್ ಅಡ್ಯಂತಾಯ ಅವರ ನೆರವಿನಿಂದ ಈತ ನಿತ್ಯ ಕರ್ಮಗಳನ್ನ ಮುಗಿಸುತ್ತಿದ್ದಾನೆ.
ಬೆಳೀತಾ ಕೈ ಕಾಲಿನ ಮೂಳೆಗಳಲ್ಲಿ ಕ್ರಾಕ್ ಕಾಣಿಸಿಕೊಂಡಿದೆ. ಹೀಗಾಗಿ ವೈದ್ಯರ ಬಳಿ ಪರೀಕ್ಷೆ ನಡೆಸಿದಾಗ ಅಸ್ಟೋ ಜೆನಿಸ್ ಇನ್‍ಫಪೇಕ್ಟಾ ಅನ್ನೋ ಖಾಯಿಲೆ ಅನ್ನೋದು ಗೊತ್ತಾಗಿದೆ. ಹೀಗಾಗಿ 10-15 ಬಾರಿ ಅಪರೇಷನ್ ಮಾಡಿಸಿದ್ರೂ ಏನೂ ಪ್ರಯೋಜನವೇ ಆಗಿಲ್ಲ. ಹಾಗಂತ ಅದೇ ಕೊರಗಿನಲ್ಲಿ ಕೂರದ ಅರ್ಜುನ್
ಮನೆಯವರಿಗೆ ಧೈರ್ಯ ತುಂಬಿ ಅಲೋಶಿಯಸ್ ಶಿಕ್ಷಣ ಸಂಸ್ಥೆ ಸೇರಿದ್ದಾನೆ. ಪೋಷಕರು ಪುತ್ರನಿಗಾಗಿ ಕಾಲೇಜಿನ ಹತ್ತಿರದಲ್ಲೇ ಬಾಡಿಗೆ ಮನೆ ಪಡೆದುಕೊಂಡಿದದಾರೆ.
ಮಗನನ್ನ ಎತ್ತಿಕೊಂಡೇ ತಂದು ತರಗತಿಯಲ್ಲೇ ಕೂರಿಸೋ ಪೆÇೀಷಕರು ಮಗನ ಕನಸಿಗೆ ಬೆಂಬಲವಾಗಿ ನಿಂತಿದ್ದಾರೆ. ಅರ್ಜುನ್ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 82 ಶೇ ಆಂಕ ಪಡೆದು ತೇರ್ಗಡೆಯಾಗಿದ್ದು, ಪಿಯುಸಿಯಲ್ಲಿ ಸೈನ್ಸ್ ಪಡೆಯೋ ಕನಸು ಕಂಡಿದ್ದ. ಆದ್ರೆ ಕೈ ಕಾಲಿನಲ್ಲಿ ಸ್ವಾಧೀನವೇ ಇಲ್ಲದ ಕಾರಣ ಪ್ರಯೋಗಾಲಯ ಸರಿಹೋಗಲ್ಲ ಎಂದು ಕಾಮರ್ಸ್ ಪಡೆದು ಇಂದು ಪಿಯುಸಿ ಅಂತಿಮ ಪರೀಕ್ಷೆ ಬರೀತಿದ್ದಾನೆ.
ಅರ್ಜುನ್‍ಗಾಗಿಯೇ ಕಾಲೇಜಿನಲ್ಲಿ ಪ್ರತ್ಯೇಕ ವೀಲ್ ಚೇರ್ ರ್ಯಾಂಪ್ ನಿರ್ಮಾಣ ಮಾಡಿರೋ ಕಾಲೇಜು, ಲಿಫ್ಟ್ ಸೌಲಭ್ಯ ಕೂಡ ಕಲ್ಪಿಸಿದೆ. ಅಲ್ಲದೇ ತರಗತಿ ಕೊಠಡಿಯಲ್ಲೂ ಹಾಸಿಗೆ ವ್ಯವಸ್ಥೆ ಮಾಡಿಸಿ, ಪರೀಕ್ಷೆಗೆ ಬರೆಯಲು ಅನುಕೂಲ ಮಾಡಿಕೊಟ್ಟಿದೆ. ಈ ಮೂಲಕ ಶಿಕ್ಷಣದ ಅದಮ್ಯ ಆಕಾಂಕ್ಷೆಯನ್ನು ಹೊಂದಿರುವ ಅರ್ಜುನ್‍ಗೆ ಕಾಲೇಜಿನ ಆಡಳಿತ ಮಂಡಳಿ ಕೂಡಾ ನೆರವು ನೀಡಿದೆ.
loading...
No comments