Breaking News

ಅಪ್ರಾಪ್ತೆ ಅತ್ಯಾಚಾರಗೈದು ಆಕೆ ಗರ್ಭಕ್ಕೆ ಕಾರಣನಾದ ಕೇರಳ ಪಾದ್ರಿ ಬಂಧನ


ಕಾಸರಗೋಡು : ಮಕ್ಕಳ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯದ ವಿರುದ್ಧ ದನಿಯೆತ್ತಿದ್ದ ಕೇರಳದ ಕ್ರೈಸ್ತ ಪಾದ್ರಿಯೊಬ್ಬರನ್ನು ಅಪ್ರಾಪ್ತೆಯೊಬ್ಬಳ ಮೇಲೆ ಅತ್ಯಾಚಾರಗೈದು ಆಕೆಯ ಗರ್ಭಕ್ಕೆ ಕಾರಣವಾದ ಆರೋಪದ ಮೇಲೆ ಬಂಧಿಸಲಾಗಿದೆ. ಬಂಧಿತ ಫಾ ರಾಬಿನ್ ವಡ್ಡಕುಮ್ಚಿರಿಯಿಲ್ (48) ಕೊಟ್ಟಿಯೂರಿನ ಸೈಂಟ್ ಸೆಬಾಸ್ಟಿಯನ್ ಚರ್ಚಿನಲ್ಲಿ ಸೇವೆ ಸಲ್ಲಿಸುತ್ತಿದ್ದರು.

ಆರೋಪಿ ಪಾದ್ರಿ ಅಪ್ರಾಪ್ತೆಯನ್ನು ಚರ್ಚ್ ನಡೆಸುತ್ತಿರುವ ಕಂಪ್ಯೂಟರ್ ಕ್ಲಾಸಿನಲ್ಲಿ ಲೈಂಗಿಕವಾಗಿ ಶೋಷಿಸಿದ್ದರೆಂದು ಪೊಲೀಸರು ತಿಳಿಸಿದ್ದಾರೆ.

ಸಂತ್ರಸ್ತೆ 17 ವರ್ಷದವಳಾಗಿದ್ದು ಕಳೆದ ತಿಂಗಳು ಖಾಸಗಿ ಆಸ್ಪತ್ರೆಯೊಂದರಲ್ಲಿ ಮಗುವಿಗೆ ಜನ್ಮ ನೀಡಿದ್ದು ತಾಯಿ ಮತ್ತು ಮಗು ಇಬ್ಬರನ್ನೂ ಉತ್ತರ ಕೇರಳದ ವಯನಾಡಿನಲ್ಲಿರುವ ಅನಾಥಾಲಯವೊಂದಕ್ಕೆ ಸ್ಥಳಾಂತರಿಸಿ ಘಟನೆಯನ್ನು ಮರೆಮಾಚುವ ಯತ್ನವನ್ನು ಆರೋಪಿ ಪಾದ್ರಿ ಮಾಡಿದ್ದಾರೆನ್ನಲಾಗಿದೆ.

ಸಂತ್ರಸ್ತೆ ಘಟನೆಯನ್ನು  ಚೈಲ್ಡ್ ಲೈನ್ ಅಧಿಕಾರಿಗಳೆದುರು ವಿವರಿಸಿದ ನಂತರ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು ಹಾಗೂ ಪಾದ್ರಿಯ ಬಂಧನ ನಡೆದಿತ್ತು.  ಪಾದ್ರಿಯ  ಎಲ್ಲಾ ಧಾರ್ಮಿಕ ಜವಾಬ್ದಾರಿಗಳನ್ನು ಅವರಿಂದ ಕಸಿದುಕೊಳ್ಳಲಾಗಿದೆ ಎಂದು ತಲಸ್ಸೇರಿ ಧರ್ಮಪ್ರಾಂತ್ಯದ ವಕ್ತಾರರೊಬ್ಬರು ತಿಳಿಸಿದ್ದಾರೆ.

ಈ ಪ್ರಕರಣದಲ್ಲಿ ಡಿ ಎನ್ ಎ ಪರೀಕ್ಷೆ ಕೂಡ ಮಾಡಲಾಗುವುದೆಂದು ಹೇಳಿದ ಪೊಲೀಸರು ಯುವತಿ ಮಗುವಿಗೆ ಜನ್ಮ ನೀಡಿದ ಆಸ್ಪತ್ರೆಯ ವಿರುದ್ಧವೂ ಪೊಲೀಸರಿಗೆ ಮಾಹಿತಿ ನೀಡದೇ ಇದ್ದುದಕ್ಕಾಗಿ ಪ್ರಕರಣ ದಾಖಲಿಸಲಾಗುವುದು ಎಂದಿದ್ದಾರೆ.

ಆರೋಪಿ ಪಾದ್ರಿ ಬಡ ಕುಟುಂಬಕ್ಕೆ ಸೇರಿದ ಯುವತಿಯ ತಂದೆಯನ್ನು ಈ ಪ್ರಕರಣದಲ್ಲಿ ಸಿಕ್ಕಿಸಿ ಹಾಕುವ ಯತ್ನ ಮಾಡಿದ್ದರೆಂದು ಹಾಗೂ  ಬಂಧನ ತಪ್ಪಿಸುವ ಸಲುವಾಗಿ ಕೆನಡಾಗೆ ತೆರಳಲೂ ಯೋಚಿಸಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ತಾನು ಕಳೆದೆರಡು ವರ್ಷಗಳಿಂದ ಪಾದ್ರಿಯಿಂದ ಯಾತನೆ ಅನುಭವಿಸುತ್ತಿರುವುದಾಗಿಯೂ ಆತ ಈ ವಿಷಯವನ್ನು ಯಾರಲ್ಲೂ ಹೇಳಬಾರದೆಂದು ಬೆದರಿಸಿದ್ದಾನೆಂದೂ ಸಂತ್ರಸ್ತೆ ಹೇಳಿದ್ದಾಳೆ.

ಯುವತಿಯ ಕುಟುಂಬ ಚರ್ಚ್ ಸಮೀಪವೇ ವಾಸಿಸುತ್ತಿದೆ. ಆರೋಪಿ ಪಾದ್ರಿಯ ವಿರುದ್ಧ ಪೊಸ್ಕೊ ಹಾಗೂ ಐಪಿಸಿಯ ವಿವಿಧ ಸೆಕ್ಷನ್ನುಗಳನ್ವಯ ಪ್ರಕರಣ ದಾಖಲಾಗಿದೆ.
   
k ale

loading...

No comments