Breaking News

ಚರ್ಚಿಗೆ ನುಗ್ಗಿ ಅಂತರ್ಜಾತಿ ವಿವಾಹ ತಡೆದ ಕೇಸರಿಪಡೆ



ಬೋಪಾಲ್ : ಮಧ್ಯ ಪ್ರದೇಶದ ಶಿವಪುರಿ ಜಿಲ್ಲೆಯಲ್ಲಿ ಚರ್ಚಿನೊಳಗೆ ನುಗ್ಗಿದ ಕೇಸರಿಪಡೆಯ ಕಾರ್ಯಕರ್ತರು ಚರ್ಚಿನಲ್ಲಿ ನಡೆಯಬೇಕಿದ್ದ ಮದುವೆ ನಿಲ್ಲಿಸಿದ ಘಟನೆ ನಡೆದಿದೆ. ಮದುವೆ ಸಮಾರಂಭ ನಡೆಯುತ್ತಿದ್ದ ಚರ್ಚಿಗೆ ಪೊಲೀಸರು ಬಂದಿದ್ದರೂ ಕೇಸರಿ ಪದೇ  ಅದಾಗಲೇ ಮದುವೆ ನಿಲ್ಲಿಸಿದ್ದರು.

ಬಳಿಕ ಈ ಜೋಡಿ ಮದುವೆ ಮುಂದೂಡಲು ಒಪ್ಪಿಕೊಂಡಿತು. ಇನ್ನು ಈ ಮದುವೆ ಆರ್ಯ ಸಮಾಜ ವಿಧಿಯಂತೆ ಇಂದೋರಿನಲ್ಲಿ ನಡೆಯಲಿದೆ.

ಉಜ್ಜೈನಿಯ ಅವ್ನಿಶ್ ಎಂಬವ ಶಿವಪುರಿಯ ಹುಡುಗಿಯೊಬ್ಬಳೊಂದಿಗೆ ಮದುವೆ ನಿಶ್ಚಿತಾರ್ಥ ಮಾಡಿಕೊಂಡಿದ್ದ. ಈ ಮದುವೆಗೆ ಅವ್ನಿಶ್ ಕುಟುಂಬಿಕರು ವಿರೋಧ ವ್ಯಕ್ತಪಡಿಸಿದ್ದರು. ಹಾಗಾಗಿ ಆತ ಹುಡುಗಿಯ ಊರಾದ ಶಿವಪುರಿಯಲ್ಲಿ ವಿವಾಹವಾಗಲು ನಿರ್ಧರಿಸಿದ್ದ.

ಹುಡುಗಿ ಕ್ರಿಶ್ಚಿಯನ್ ಸಮುದಾಯದವಳಾಗಿದ್ದು, ಇದೊಂದು ಅಂತರ್-ಜಾತಿಯ ವಿವಾಹ ಎಂಬ ಮಾಹಿತಿ ಪಡೆದ ಕೇಸರಿ ಪಡೆ ಚರ್ಚಿನೊಳಗೆ ನುಗ್ಗಿ ದಾಂದಲೆ ನಡೆಸಿ, ಮಧೂವರರನ್ನು ಹೊರಗೆ ಹಾಕಿ, ಬಲವಂತವಾಗಿ ವಿವಾಹ ಮುಂದೂಡುವಂತೆ ಮಾಡಿದೆ. ಹುಡುಗಿ ಎಷ್ಟೇ ಬೇಡಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ.

ಘಟನಾ ಸ್ಥಳಕ್ಕೆ ಪೊಲೀಸರು ತಲುಪಿದ್ದರೂ, ಅವರು ಯಾವುದೇ ಕ್ರಮ ಕೈಗೊಂಡಿಲ್ಲ. ಕೇಸರಿ ಪಡೆಗೆ ಬೆದರಿದ ಈ ಜೋಡಿ, ಮುಂದೆ ಆರ್ಯ ಸಮಾಜ ವಿಧಿಯಂತೆ ಇಂದೋರಿನಲ್ಲಿ ವಿವಾಹವಾಗಲಿದೆ.

loading...

No comments