Breaking News

ಅಲ್ಲಿ ಪೋಲೀಸ್ ಇಲ್ಲಿ ಖತರ್ನಾಕ್ ಕಾರು ಕಳ್ಳ


ಬೆಂಗಳೂರು : ಬೆಂಗಳೂರು ಮಡಿವಾಳ ಠಾಣೆ ಪೋಲೀಸರು ಬೆಂಗಳೂರು ಅಷ್ಟೇ ಅಲ್ಲದೆ ಹೊರರಾಜ್ಯಗಳಲ್ಲಿ ದುಬಾರಿ ಕಾರು ಕಳ್ಳತನ ಮಾಡುತ್ತಿದ್ದ. ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.  ಬಂಧಿತನನ್ನು ನ್ಯೂ ಗುರಪ್ಪನಪಾಳ್ಯದ ನಿವಾಸಿ ಪಿಲ್ಲಾಕಲ್ ನಜೀರ್ ಎಂದು ತಿಳಿದುಬಂದಿದ. 

ಈತ  1998 ರಿಂದ 2006ರ ವರೆಗೆ ಬಹ್ರೇನ್ ಪೋಲೀಸ್ ಇಲಾಖೆಯಲ್ಲಿ ಕಾನ್‍ಸ್ಟೆಬಲ್ ಆಗಿ ಸೇವೆಸಲ್ಲಿಸಿ ಭಾರತಕ್ಕೆ ಬಂದು ದುಬಾರಿ ಕಾರು ಕಳ್ಳತನದಲ್ಲಿ ತೊಡಗಿದ್ದ. ಈತನ ಮೇಲೆ ಈಗಾಗಲೇ ಅಶೋಕ ನಗರ, ಬಸವನಗುಡಿ, ಮಡಿವಾಳ, ಕೋರಮಂಗಲ,  ಪರಪ್ಪನ ಅಗ್ರಹಾರ, ಜಯನಗರ, ಮೈಕೋ ಲೇಔಟ್, ಕಬ್ಬನ್ ಪಾರ್ಕ್, ದೇವನಹಳ್ಳಿ, ಮಹಾರಾಷ್ಟ್ರದ ಮುಂಬೈನ ನರೋಲ್, ತಮಿಳುನಾಡಿನ ಚೆನ್ನೈನ ಅಂಬತ್ತೂರು ಠಾಣೆಗಳಲ್ಲಿ ಪ್ರಕರಣ ದಾಖಲಾಗಿವೆ.

ಬಂದಿತನಿಂದ 35ಲಕ್ಷ ಬೆಲೆಯ ಕದ್ದ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಈತ ಕದ್ದ ದುಬಾರಿ ಕಾರುಗಳನ್ನು ನಕಲಿ ದಾಖಲೆ ಸೃಷ್ಟಿಸಿ ಮಾರುತ್ತಿದ್ದ ಎಂದು ಪೋಲೀಸರ ವಿಚಾರಣೆಯಲ್ಲಿ ತಿಳಿದುಬಂದಿದೆ. ಬೆಂಗಳೂರು ಮಡಿವಾಳ ಠಾಣೆ ಪೋಲೀಸರು ವಿಚಾರಣೆ ಮುಂದುವರೆಸಿದ್ದಾರೆ.



loading...

No comments