Breaking News

ಭಾರತೀಯ ಮುಸ್ಲಿಮರ ರಾಜಧಾನಿ ಹೈದರಾಬಾದ್ - ಅಕ್ಬರುದ್ದಿನ್ ಓವೈಸಿ

ಹೈದರಾಬಾದ್ : ಭಾರತದಲ್ಲಿರುವ ಮುಸ್ಲಿಮರಿಗೆ ಹೈದರಾಬಾದ್ ನೈಜ ರಾಜಧಾನಿ ಎನ್ನುವ ಮೂಲಕ ಮಜ್ಲಿಸ್-ಇ-ಇತ್ತೆಹಾದುಲ್ ಮುಸ್ಲಿಮೀನ್ ಪಕ್ಷದ ಶಾಸಕ ಅಕ್ಬರುದ್ದೀನ್ ಒವೈಸಿ ವಿವಾದದ ಕಿಡಿಯನ್ನು ಹೊತ್ತಿಸಿದ್ದಾರೆ.
ಹೈದರಾಬಾದ್ ಭಾರತೀಯ ಮಸ್ಲೀಮರಿಗೆ ನೈಜ ರಾಜಧಾನಿ ಅಷ್ಟೇ ಅಲ್ಲದೆ ಹೈದರಾಬಾದ್ ಹಿಂದೂ-ಮುಸ್ಲೀಮರಿಗೆ ಸುರಕ್ಷಿತ ನಗರ ಎಂದು ಹೇಳಿದ್ದಾರೆ. ಆಲ್ ಇಂಡಿಯಾ ಮಜ್ಲಿಸೆ ಇತ್ತೆಹಾದುಲ್ ಮುಸ್ಲಿಮೀನ್ ಪಕ್ಷದ 59ನೇ ವಾರ್ಷಿಕೋತ್ಸವದ ಅಂಗವಾಗಿ ದಾರುಸ್ಸಲಾಂನಲ್ಲಿ ಹಮ್ಮಿಕೊಳ್ಳಲಾಗಿದ್ದ ಸಮಾರಂಭದಲ್ಲಿ ಚಂದ್ರಾಯನಗುಟ್ಟಾ ಕ್ಷೇತ್ರದ ಶಾಸಕ ಅಕ್ಬರುದ್ದೀನ್ ಒವೈಸಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.
ವಾಸ್ತವದಲ್ಲಿ ಭಾರತದ ರಾಜಧಾನಿ ದಿಲ್ಲಿಯಾಗಿದ್ದರೂ ಭಾರತೀಯ ಮುಸ್ಲಿಮರಿಗೆ ಹೈದರಾಬಾದ್ ನೈಜ ರಾಜಧಾನಿ. ಭಾರತೀಯ ಮುಸ್ಲಿಮರ ಚಿಂತನೆ ಹಾಗೂ ವಿವೇಚನೆ ಆರಂಭವಾಗುತ್ತದೆ ಎಂದ ಅಕ್ಬರುದ್ದೀನ್ ಒವೈಸಿ ಇಸ್ಲಾಂ ಸಮುದಾಯದ ಮೂಲ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ಹಲವು ಯೋಜನೆಗಳನ್ನು ಜಾರಿಗೊಳಿಸಲು ಎಂಐಎಂ ಪಕ್ಷ ಪಟ್ಟು ಬಿಡದೆ ಶ್ರಮಿಸಿದೆ ಎಂದು ಒತ್ತಿ ಹೇಳಿದರು. ಅಧಿಕಾರದ ಚುಕ್ಕಾಣಿ ಹಿಡಿಯಲೇಬೇಕು ಎಂದು ಪಣ ತೊಟ್ಟಿರುವ ಸಮಾಜವಾದಿ ಹಾಗೂ ಭಾರತೀಯ ಜನತಾ ಪಾರ್ಟಿ ವಿರುದ್ಧ ಅಕ್ಬರುದ್ದೀನ್ ಒವೈಸಿ ಹರಿಹಾಯ್ದರು.
loading...

No comments