Breaking News

ವೆಂಕಟೇಶ್ವರ ದೇಗುಲದಲ್ಲಿ ಸಾಲುಗಟ್ಟಿ ಪ್ರಾರ್ಥನೆ ಸಲ್ಲಿಸಿದ ಮುಸ್ಲಿಮರು



ಆಂಧ್ರಪ್ರದೇಶ : ಹಿಂದೂಗಳ ಹೊಸ ವರ್ಷ ಯುಗಾದಿಯಂದು ಕಡಪಾ ನಗರ ಮತ್ತು ರಾಯಲಸೀಮಾದ ಕೆಲವು ಪ್ರದೇಶಗಳಲ್ಲಿ ಶ್ರೀ ವೆಂಕಟೇಶ್ವರ ದೇಗುಲದಲ್ಲಿ ಪ್ರಾರ್ಥನೆ ಸಲ್ಲಿಸುವ ಸಂಪ್ರದಾಯವಿದೆ. ಕಡಪಾದಲ್ಲಿ ನಡೆಯುವ ಈ ಪ್ರಾರ್ಥನೆ ಮತ್ತು ಪೂಜೆಯಲ್ಲಿ ನೂರಾರು ಮುಸ್ಲಿಮರು ಭಾಗವಹಿಸುತ್ತಾರೆ.


ಯುಗಾದಿ ಸಂಧರ್ಭದಲ್ಲಿ ಮುಸ್ಲಿಮರು ವೆಂಕಟೇಶ್ವರ ದೇವಾಲಯದಲ್ಲಿ ಸಾಲು ನಿಂತು  ಪ್ರಾರ್ಥನೆ ಸಲ್ಲಿಸುತ್ತಾರೆ ಈ ಬಾರಿ ಕೂಡ  ಮುಸ್ಲಿಂ ಪುರುಷರು, ಮಹಿಳೆಯರು, ಮಕ್ಕಳು ಬೆಳಗ್ಗೆಯೇ ಸರತಿಯಲ್ಲಿ ನಿಂತು ಹಣ್ಣು, ಕಾಯಿ ಸಮರ್ಪಿಸಿ ಪ್ರಾರ್ಥನೆ ಮಾಡಿದರು. ಪುರೋಹಿತರು ಕೂಡ ವಿಶೇಷ ಪೂಜೆ ನರವೇರಿಸಿದರು ಎಂದು ತಿಳಿದು ಬಂದಿದೆ


loading...

No comments