ತ್ರಿವಳಿ ತಲಾಖ್ ನಿಷೇಧಿಸುವಂತೆ ಯೋಗಿ ಆಧಿತ್ಯನಾಥ ಅವರಿಗೆ ಪತ್ರ ಬರೆದ ಮುಸ್ಲಿಂ ಮಹಿಳೆ
ಲಕ್ನೋ: ತ್ರಿವಳಿ ತಲಾಖ್ ನಿಷೇಧಿಸಿ ಎಂದು ಇಬ್ಬರು ಮಕ್ಕಳ ತಾಯಿ, ತ್ರಿವಳಿ ತಲಾಖ್ ಸಂತ್ರಸ್ತೆ ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆಧಿತ್ಯನಾಥ ಅವರಿಗೆ ಪತ್ರ ಬರೆದಿದ್ದಾರೆ.
ಮೂರನೇ ಮಗುವಿನ ಗರ್ಭಪಾತಕ್ಕೆ ಒಪ್ಪದ ಕಾರಣ ಲಕ್ನೋ ನಿವಾಸಿ ಶಗುಫ್ತಾ ಶಾ ಎಂಬುವವರಿಗೆ ಆಕೆಯ ಪತಿ ತ್ರಿವಳಿ ತಲಾಖ್ ನೀಡಿದ್ದಾನೆ.
ಇತ್ತೀಚೆಗೆ ನಡೆದ ಉತ್ತರ ಪ್ರದೇಶ ಚುನಾವಣೆಯಲ್ಲಿ ನಾನು ಬಿಜೆಪಿಗೆ ಮತಹಾಕಿದ್ದೇನೆ, ಹೀಗಾಗಿ ಸಾಮಾಜಿಕ ಪಿಡುಗಾಗಿರುವ ತ್ರಿವಳಿ ತಲಾಖ್ ನಿಷೇಧಿಸಲು ಪ್ರಧಾನಿ ನರೇಂದ್ರ ಮೋದಿ ಮಧ್ಯ ಪ್ರವೇಶಿಸುವಂತೆ ಪತ್ರ ಬರೆದಿರುವುದಾಗಿ ಶಹನ್ ಪುರ ನಿವಾಸಿ ಶಗುಫ್ತಾ ಶಾ ಹೇಳಿದ್ದಾರೆ. ಪತ್ರದ ಪ್ರತಿಗಳನ್ನು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ, ಜಿಲ್ಲಾಧಿಕಾರಿ ಮತ್ತು ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಕಳುಹಿಸಲಾಗಿದೆ.
ಮೊದಲ ಇಬ್ಬರು ಹೆಣ್ಣು ಮಕ್ಕಳಾಗಿದ್ದು, 3ನೇ ಮಗು ಹೆಣ್ಣಾಗಿ ಹುಟ್ಟಲಿದೆ ಎಂಬ ಭಯದಿಂದ ಶಗುಫ್ತಾಳ ಪತಿ ಶಮ್ಶದ್ ಸಯೀದ್ ಗರ್ಭಪಾತ ಮಾಡಿಸುವಂತೆ ಒತ್ತಾಯಿಸಿದ್ದಾನೆ. ಇದನ್ನು ಒಪ್ಪದ ಶಗುಫ್ತಾಳನ್ನು ಮನಬಂದಂತೆ ಥಳಿಸಿ, ಮೂರು ಬಾರಿ ತಲಾಖ್ ಹೇಳಿ ತ್ಯಜಿಸಿದ್ದಲ್ಲದೇ, ರಸ್ತೆಯಲ್ಲೇ ಬಿಟ್ಟು ಹೋಗಿದ್ದಾನೆ.
loading...
No comments