Breaking News

ಮೀರತ್‌ ವಂದೇ ಮಾತರಂ ಹಾಡಲು ವಿರೋಧ ವ್ಯಕ್ತಪಡಿಸಿದ ಮುಸ್ಲಿಂರು ?


ಮೀರತ್‌: ನಗರ ನಿಗಮ ಮಂಡಳಿಯ ಸದಸ್ಯರಿಗೆ ವಂದೇ ಮಾತರಂ ಹಾಡುವುದನ್ನು ಕಡ್ಡಾಯಗೊಳಿಸಿರುವ ಮೇಯರ್‌ ಹರಿಕಾಂತ್‌ ಅಹ್ಲುವಾಲಿಯಾ ಅವರ ಆದೇಶಕ್ಕೆ ವಿರೋಧ ವ್ಯಕ್ತವಾಗಿದೆ
ಒಂದೇ ಮಾತರಂ ಹಾಡುವುದು ಕಡ್ಡಾಯ. ಇಲ್ಲದಿದ್ದರೆ, ಮಂಡಳಿಯ ಸಭೆ ನಡೆಯುವ ಕೊಠಡಿಯೊಳಗೆ ಪ್ರವೇಶ ನಿರಾಕರಿಸುವ ಜತೆಗೆ ಕಲಾಪಗಳಲ್ಲಿ ಭಾಗವಹಿಸಲು ಅವಕಾಶ ನೀಡುವುದಿಲ್ಲ ಎಂದು ಹರಿಕಾಂತ್‌ ಖಡಕ್‌ ಸಂದೇಶ ರವಾನಿಸಿದ್ದಾರೆ.

ಮೇಯರ್‌ ಆದೇಶಕ್ಕೆ ಮಂಡಳಿಯ ಮುಸ್ಲಿಂ ಸದಸ್ಯರು ತಗಾದೆ ತೆಗೆದಿದ್ದು, 'ವಂದೇ ಮಾತರಂ' ಹಾಡುವುದು ಕಡ್ಡಾಯವಲ್ಲ ಎಂಬ ಸುಪ್ರೀಂ ಕೋರ್ಟ್‌ ಆದೇಶವಿದೆ ವಾದವನ್ನು ಮುಂದಿಟ್ಟು ಸಭೆಯಿಂದ ಹೊರ ನಡೆಯಲು ಮುಂದಾದರು.

ಈ ಸಂದರ್ಭದಲ್ಲಿ ಕೆಲ ಬಿಜೆಪಿ ಸದಸ್ಯರು 'ಭಾರತದಲ್ಲಿ ಇರಬೇಕು ಎಂದರೆ ವಂದೇ ಮಾತರಂ' ಹಾಡಲೇಬೇಕು ಎಂದು ಸಭೆಯಿಂದ ಹೊರನಡೆಯುತ್ತಿದ್ದ ಸದಸ್ಯರಿಗೆ ಟಾಂಗ್‌ ನೀಡಿದರು. ಉತ್ತರ ಪ್ರದೇಶದಲ್ಲಿ ಬಿಜೆಪಿ ಸರಕಾರ ರಚನೆಯಾದ ನಂತರ ಮಂಗಳವಾರ ನಡೆದ ಮೊದಲ ಮಂಡಳಿ ಸಭೆ ಇದಾಗಿದ್ದು, ಮೊದಲ ಸಭೆಯಲ್ಲೇ ವಿವಾದ ಸೃಷ್ಟಿಯಾಗಿದೆ.

toi

loading...

No comments