Breaking News

ನಮ್ಮ ಕ್ಯಾಂಟೀನ್‌’ಗೆ ಇಂದಿರಾ ಕ್ಯಾಂಟೀನ್‌’ ಎಂದು ಮರು ನಾಮಕರಣಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ವರ್ಷ ಮಂಡಿಸಿದ ಬಜೆಟ್ ನಲ್ಲಿ ನಮ್ಮ ಕ್ಯಾಂಟೀನ್ ಯೋಜನೆಯನ್ನು ಘೋಷಿಸಿದ್ದರು .ಇದೀಗ ರಾಜ್ಯ ಕಾಂಗ್ರೆಸ್ ಪಾಳಯದಲ್ಲಿ ನಡೆದ ಬೆಳವಣಿಗೆಯಲ್ಲಿ   ನಮ್ಮ ಕ್ಯಾಂಟೀನ್‌’ಗೆ ಇಂದಿರಾ ಕ್ಯಾಂಟೀನ್‌’ ಎಂದು ಮರು ನಾಮಕರಣ ಮಾಡಲಾಗಿದೆ.
ವಿಧಾನಸಭೆಯಲ್ಲಿ ಮಾತನಾಡಿದ ಅವರು, ‘ನಮ್ಮ ಕ್ಯಾಂಟೀನ್‌ ಬದಲು ಇಂದಿರಾ ಕ್ಯಾಂಟೀನ್‌ ಎಂದು ನಾಮಕರಣ ಮಾಡುವಂತೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಒಕ್ಕೊರಲ ಒತ್ತಾಯ ಬಂದ ಹಿನ್ನಲೆಯಲ್ಲಿ ಮರುನಾಮಕರಣ ಮಾಡಲಾಗಿದೆ ಎಂದು ಹೇಳಲಾಗಿದೆ.

‘ಬಡ ಜನರ ಅನುಕೂಲಕ್ಕಾಗಿ ಬೆಂಗಳೂರಿನ 198 ಪ್ರತಿ ವಾರ್ಡ್‌ಗಳಲ್ಲಿ ತಲಾ ಒಂದು ‘ಇಂದಿರಾ ಕ್ಯಾಂಟೀನ್‌’ ಆರಂಭಿಸುತ್ತಿದ್ದು, ಅದರ ಯಶಸ್ಸು ಆಧರಿಸಿ ಮುಂದಿನ ದಿನಗಳಲ್ಲಿ ಈ ಸೌಲಭ್ಯವನ್ನು ರಾಜ್ಯದಾದ್ಯಂತ ವಿಸ್ತರಿಸಲಾಗುವುದು’ ಎಂದು ಸಿದ್ದರಾಮಯ್ಯ ಹೇಳಿದ್ದಾರೆ .
loading...

No comments