Breaking News

ಪೇಸ್ಬುಕ್ ಪೇಜ್ ಮುಖೆನಾ ಸುಹಾನಗೆ ಬೆದರಿಕೆ ಸೂಕ್ತ ಕ್ರಮ ಕೈಗೊಳ್ಳಲು ಖಾದರ್ ಸೂಚನೆ


ಬೆಂಗಳೂರು:- ಕಳೆದ ಕೆಲವು ದಿನದಿಂದ ಸಮಾಜಿಕ ಜಾಲತಾಣದಲ್ಲಿ ಧರ್ಮದ ಪರವಾದ ನಿಂದನಾತ್ಮಕ  ಹೇಳಿಕೆಗಳು ಹರಿದಾಡುತ್ತಾ ಇದ್ದು ಇದಕ್ಕೆ ಕಾರಣ ಮುಸ್ಲಿಂ ಸಮುದಾಯದ ಯುವತಿ ಸುಹಾನ ಸಾಗರ್ ಪ್ರತಿಷ್ಠಿತ ರಿಯಾಲಿಟಿ ಶೋ ಸರಿಗಮಪ ಸೀಸನ್ 13 ರ ಸ್ಪರ್ಧಿ .

 ವಿಚಿತ್ರ ಅಂದರೆ ಈ ಶೋ ಆರಂಭಕ್ಕೂ ಮುನಾ ಇದೀಗ ಬಾರಿ ಸುದ್ದಿಯಲ್ಲಿ ಇದೆ ಕಾರಣ ಅರ್ಹತಾ ಸುತ್ತಿನಲ್ಲಿ ಶಿವಮೊಗ್ಗ ಮೂಲದ ಸಾಗರ ತಾಲೂಕಿನ ಸುಹಾನ ಅನುವ ಮುಸ್ಲಿಂ ಹೆಣ್ಣು ಮಗಳು ಇದರಲ್ಲಿ ಭಾಗವಹಿಸಿ ಇಡೀ ದೇಶದ ಗಮನ ಸೇಳೆದಿದ್ದಾಳೆ . ಆದರೆ ಇವಳ ಹಾಡುಗಾರಿಕೆಯನ್ನ ತಮ್ಮದೆ ಧರ್ಮದ ಕೆಲವು ಮುಖ್ಯಸ್ಥರು ವಿರೋಧ ವ್ಯಕ್ತಪಡಿಸಿದರು .
ಇಷ್ಟೇ ಅಲ್ಲ ಇನ್ನೂ ಒಂದು ಹೆಜ್ಜೆ ಮುಂದೆ ಹೋದ ಕೆಲವು ಕಿಡಿಗೆಡಿಗಳು ಸುಹಾನರಿಗೆ ಮಂಗಳೂರು ಮುಸ್ಲಿಂ ಪೇಸ್ಬುಕ್ ಪೇಜ್ ಮುಖೆನಾ ಬಹಿರಂಗವಾಗಿ ಬೆದರಿಕೆ ಹಾಕಿದ್ದಾರೆ ಇದೀಗ ಆ ಬೆದರಿಕೆ ಇಡೀ ದೇಶದಾದ್ಯಂತ ಸಂಚಲನ ಉಂಟು ಮಾಡಿದು ಹಲವಾರು ಸಂಘಟನೆಗಳು ಸುಹಾನರಿಗೆ ಬೆಂಬಲ ಘೊಷಿಸಿದ ಬೆನ್ನಲೆ ರಾಜ್ಯ ಸರಕಾರ ಎಚ್ಚೆತ್ತು ಕೊಂಡು ಬೆದರಿಕೆ ಹಾಕಿದ ಪೇಜ್ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಸಚಿವ ಯುಟಿ ಖಾದರ್ ಸೂಚಿಸಿದ್ದಾರೆ .
ಈ ಹಿಂದೆಯೂ ಹಲವಾರು ಕೋಮು ಭಾವನೆಗೆ ಧಕ್ಕೆ ,ಕೊಲೆ ಬೆದರಿಕೆ ದರೋಡೆಗೆ ಪ್ರೇರಣೆ ಮುಂತಾದ ಪ್ರಕರಣಗಳು ಮಂಗಳೂರು ಮುಸ್ಲಿಂ  ಪುಟದ ಮೇಲೆ ಇದ್ದರೂ ಇದುವರೆಗೂ ಅದರ ನಿರ್ವಾಹಕನ ಬಂದನ ಮಾಡದೆ ಇದದ್ದು ಹಲವಾರು ಅನುಮಾನಕ್ಕೆ ಎಡೆಮಾಡಿಕೊಟ್ಟಿದು ಜನ ಆಕ್ರೋಶಕ್ಕೆ ತುತ್ತಾಗಿದೆ .

ಪೊಲೀಸ್ ಇಲಾಖೆ ಆದಷ್ಟು ಬೇಗ ಎಚ್ಚೆತ್ತು ಕೊಂಡು ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕಾಗಿ ಸಾರ್ವಜನಿಕರು ಒತ್ತಾಯಿಸಿದ್ದಾರೆ 
loading...

No comments