Breaking News

ಕಾಪು ಅಂಗಡಿಗೆ ನುಗ್ಗಿದ ಲಾರಿ


ಕಾಪು : ಲಾರಿ ಚಾಲಕನೋರ್ವ ರಿವರ್ಸ್ ತೆಗೆಯುವ ಭರದಲ್ಲಿ ನಾಲ್ಕು ವಾಹನಗಳಿಗೆ ಡಿಕ್ಕಿ ಹೊಡೆದು ಬೇಕರಿಯೊಂದಕ್ಕೆ ಹಾನಿ ಮಾಡಿದ ಘಟನೆ ಹೆಜಮಾಡಿಯಲ್ಲಿ ನಿನ್ನೆ ರಾತ್ರಿ ಸಂಭವಿಸಿದೆ. ಹೆಜಮಾಡಿ ಬಸ್ ನಿಲ್ದಾಣದ ಪಕ್ಕದಲ್ಲಿರುವ ಮರದ ಮಿಲ್ ಆವರಣದಲ್ಲಿದ್ದ ೪೦೭ ಲಾರಿಯನ್ನು  ರಿವರ್ಸ್ ತೆಗೆಯುವ ಭರದಲ್ಲಿ ಹಿಂಬದಿಯಲ್ಲಿದ್ದ ಎರಡು ಕಾರು ಮತ್ತು ಒಂದು ಬೈಕಿಗೆ ಡಿಕ್ಕಿ ಹೊಡೆದು ಬಳಿಕ ರಭಸವಾಗಿ ನುಗ್ಗಿದ ಪರಿಣಾಮ ಪಕ್ಕದಲ್ಲಿಯೇ ಇದ್ದ ಮಿನಿ ಗೂಡ್ಸ್ ಟೆಂಪೋಗೆ ಡಿಕ್ಕಿ ಹೊಡೆದು ಸುಮಾರು ಅರ್ಧ ಪರ್ಲಾಂಗ್ ನಷ್ಟು ದೂರ ತಳ್ಳುತ್ತಾ ಬಂದು ಸಮೀಪದಲ್ಲಿದ್ದ ಬೇಕರಿಗೆ ಗೂಡ್ಸ್ ವಾಹನ ನುಗ್ಗಿದೆ.

ಘಟನೆಯಿಂದ ಎರಡು ಕಾರು ಒಂದು ಬೈಕ್ ಹಾಗೂ ಗೂಡ್ಸ್ ಟೆಂಪೋ ಜಖಂಗೊಂಡಿದ್ದು, ಅಂಗಡಿಗೆ ಹಾನಿಯಾಗಿದೆ. ಅಂಗಡಿ ಒಳಗಿದ್ದವರು ಅಪಾಯದಿಂದ ಪಾರಾಗಿದ್ದಾರೆ. ಘಟನೆಯಿಂದ ಇದರಿಂದಾಗಿ ಕೆಲಕಾಲ ರಸ್ತೆ ತಡೆ ಉಂಟಾಗಿತ್ತು. ಘಟನೆ ನಡೆದ ತಕ್ಷಣ ಪಡುಬಿದ್ರಿ ಪೊಲೀಸರು ಸ್ಥಳಕ್ಕಾಗಮಿಸಿ ಕಾರ್ಯಚರಣೆ ಆರಂಭಿಸಿದ್ದಾರೆ. ಪೊಲೀಸರೊಂದಿಗೆ ಸ್ಥಳೀಯರು ಕೂಡಾ ಇದಕ್ಕೆ ಸಾಥ್ ನೀಡಿರುವುದರಿಂದ ಸ್ಥಳದಿಂದ ಎಲ್ಲಾ ವಾಹನ ತೆರವುಗೊಳಿಸಲು ಸಹಕಾರಿಯಾಯಿತು.
loading...

No comments