ಮದುವೆಯಾಗುವುದಾಗಿ ನಂಬಿಸಿ ಮಹಿಳೆಗೆ ಮಗು ಕರುಣಿಸಿದವ ಜೈಲು ಪಾಲು
ವಿಟ್ಲ : ತಲೆಮರೆಸಿಕೊಂಡಿದ್ದ ಆರೋಪಿಯನ್ನು ವಿಟ್ಲ ಪೊಲೀಸರ ತಂಡ ವಿಟ್ಲಕಟ್ಟೆ ಎಂಬಲ್ಲಿ ಬಂಧಿಸಿ ನಿನ್ನೆ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.
ಬಂಧಿತ ಆರೋಪಿಯನ್ನು ಕೇಪು ನಿವಾಸಿ ಕಂಬಳದಡ್ಕ ನಿವಾಸಿ ರುಕ್ಮಯ ಯಾನೆ ತಮ್ಮು (೩೪) ಎಂದು ಗುರುತಿಸಲಾಗಿದೆ. ಎರುಂಬು ಮೂಲದ ಮಹಿಳೆಗೆ ವಂಚಿಸಿದ ಬಗ್ಗೆ ೨೦೧೬ ನವೆಂಬರ್‌ನಲ್ಲಿ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈತ ಮಹಿಳೆಯನ್ನು ಪ್ರೀತಿಸುವ ನೆಪವೊಡ್ಡಿ ಮದುವೆಯಾಗುವುದಾಗಿ ಹೇಳಿಕೊಂಡು ದೂರವಾಣಿ ಕರೆ ಮಾಡುತ್ತಾ ವಂಚಿಸಿ, ಬಳಿಕ ಪರಾರಿಯಾಗುತ್ತಿದ್ದ ಎನ್ನಲಾಗಿದೆ. ಸಂತ್ರಸ್ತ ಮಹಿಳೆ ೨೦೧೬ ಅಕ್ಟೋಬರ್ ೩೦ಕ್ಕೆ ಮಂಗಳೂರು ಸರ್ಕಾರಿ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ್ದಳು. ಬಳಿಕ ವಿಟ್ಲ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದು, ಆರೋಪಿಗಾಗಿ ಬಲೆ ಬೀಸಿದ್ದರು. ಮಹಿಳೆಗೆ ಬಂದ ದೂರವಾಣಿ ಕರೆಯ ಆಧಾರದಲ್ಲಿ ವಿಟ್ಲ ಪೊಲೀಸರು ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
loading...
No comments