Breaking News

ವಯನಾಡು ಅನಾಥಾಲಯದ 7 ಆದಿವಾಸಿ ಬಾಲೆಯರ ಮೇಲೆ 2 ತಿಂಗಳಿಂದ ಸತತ ಅತ್ಯಾಚಾರ


ಕಾಸರಗೋಡು : ವಯನಾಡು ಜಿಲ್ಲೆಯ ಅನಾಥಾಲಯದ ಏಳು ಅಪ್ರಾಪ್ತ ಆದಿವಾಸಿ ಬಾಲಕಿಯರ ಮೇಲೆ ಅದೇ ಸಂಸ್ಥೆಯ ಸಿಬ್ಬಂದಿಯೊಬ್ಬ ಲೈಂಗಿಕ ದೌರ್ಜನ್ಯವೆಸಗಿದ ಘಟನೆ ಬೆಳಕಿಗೆ ಬಂದಿದೆ. ಸಂತ್ರಸ್ತ ಬಾಲಕಿಯರಲ್ಲೊಬ್ಬಳು ಎರಡು ದಿನಗಳ ಹಿಂದೆ ಈ ವಿಚಾರವನ್ನು ಶಾಲೆಯ ಅಧಿಕಾರಿಯೊಬ್ಬರಲ್ಲಿ ಬಾಯ್ಬಿಟ್ಟಾಗ ವಿಷಯ ಬಹಿರಂಗಗೊಂಡಿತ್ತು.

ಆರೋಪಿಯು ಆರಂಭದಲ್ಲಿ 7, 8 ಹಾಗೂ 9ನೇ ತರಗತಿಯಲ್ಲಿ ಕಲಿಯುತ್ತಿರುವ ಈ ಬಾಲಕಿಯರಿಗೆ ಸಿಹಿತಿಂಡಿಯ ಆಮಿಷ ತೋರಿಸಿ ಅವರನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅಲ್ಲಿ ಅವರಿಗೆ ಅಶ್ಲೀಲ ಚಿತ್ರಗಳನ್ನು ತೋರಿಸಿ ನಂತರ ಅವರ ಮೇಲೆ  ಲೈಂಗಿಕ ದೌರ್ಜನ್ಯವೆಸಗುತ್ತಿದ್ದನೆನ್ನಲಾಗಿದೆ. ಈ ವಿಚಾರವನ್ನು ಯಾರಲ್ಲಾದರೂ ಬಹಿರಂಗಪಡಿಸಿದರೆ ಪರಿಸ್ಥಿತಿ ನೆಟ್ಟಗಾಗದು ಎಂದೂ ಆತ ಅವರನ್ನು ಬೆದರಿಸುತ್ತಿದ್ದನೆಂದು ಆರೋಪಿಸಲಾಗಿದೆ.

ಪ್ರಕರಣದ  ತನಿಖೆಯು ವಯನಾಡು ಎಸ್ಪಿ ರಾಜಪಾಲ್ ಮೀನಾ ಅವರ ನೇತೃತ್ವದಲ್ಲಿ ತನಿಖೆ ನಡೆಯುತ್ತಿದ್ದು  ಕೆಲವರನ್ನು ಈಗಾಗಲೇ ವಿಚಾರಣೆಗಾಗಿ ವಶಕ್ಕೆ ಪಡೆದುಕೊಳ್ಳಲಾಗಿದೆಯೆಂದು ಹೇಳಲಾಗಿದೆ.

loading...

No comments