Breaking News

ನೋಟೀಸ್ ಗೆ ಧಿಕ್ಕಾರವಿರಲಿ ಹೆಚ್.ವಿಶ್ವನಾಥ್


ಮೈಸೂರು: ನಾವೆಂದೂ ಒಳಗೆ ಹೊರಗೆ ನಡೆದುಕೊಂಡವರಲ್ಲ. ಮಾತನಾಡುವಾಗ ಎಚ್ಚರವಿರಲಿ, ಸೂಚನೆ ನೀಡದೆ ಕಳುಹಿಸಿರುವ ನಿಮ್ಮ ನೋಟೀಸ್ ಗೆ ಧಿಕ್ಕಾರವಿರಲಿ ಎಂದು ಮಾಜಿ ಸಂಸದ ಹೆಚ್.ವಿಶ್ವನಾಥ್ ಕಿಡಿ ಕಾರಿದರು.

ಸುದ್ದಿ ಗೋಷ್ಟಿಯಲ್ಲಿ ಮಾತನಾಡುತ್ತಿದ್ದ ಅವರು ಕೆ.ಪಿ.ಸಿ.ಸಿ ಅಧ್ಯಕ್ಷ ಡಾ. ಜಿ ಪರಮೇಶ್ವರ್ ನೀಡಿದ್ದ ನೋಟೀಸ್  ಗೆ ಬಹಿರಂಗ ಪತ್ರದ ಮೂಲಕ ಉತ್ತರ ನೀಡಿದ್ದೆನೇ. ನಾವು ಕಾಂಗ್ರೆಸ್ ಪಕ್ಷದ ನಿಷ್ಠರು. ಕಳೆದ 40 ವರ್ಷಗಳಿಂದ ನಿಷ್ಟಾವಂತ ಕಾರ್ಯಕರ್ತನಾಗಿ. ಸಚಿವ ನಾಗಿ, ಸಂಸದನಾಗಿ ಸೇವೆ ಸಲ್ಲಿಸಿದ್ದೇನೆ. ರಾಜಕೀಯ ಜೀವನದಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲ. ನೀವು ಮಾಡಿರುವ ಆರೋಪ ಕೇವಲ ಕಪೋಲ ಕಲ್ಪಿತ ವಾಗಿದ್ದು  ಹುನ್ನಾರ ಕೂಡಿದೆ. ನೋಟೀಸ್ ನೀಡುವಾಗ ಸಕಾರಾತ್ಮಕ ವಾಗಿ ಚಿಂತನೆ ನೆಡೆಸದೆ ಬೇರೆಯವರ ಷಂಡ್ಯಂತ್ರಕ್ಕೆ ಮಣಿದು ನೋಟೀಸ್ ನೀಡಿರುವುದು ನೋವು ತಂದಿದೆ ಎಂದರು.

ಡಾ.ಜಿ.ಪರಮೇಶ್ವರ್ ಅವರಿಗೆ ಪ್ರಶ್ನೆಗಳ ಮಳೆಗರೆದ ವಿಶ್ವನಾಥ್ .ಹಿರಿಯ ಮುಖಂಡರಾದ ಜಾಫರ್ ಶರೀಫ್, ಜನಾರ್ಧನ ಪೂಜಾರಿ ಮತ್ತು ನಾನು ಎಐಸಿಸಿ ಸದಸ್ಯರು. ನಮಗೆ ನೋಟಿಸ್ ‌ನೀಡುವ ಅಧಿಕಾರ ಎಐಸಿಸಿ ಪದಾಧಿಕಾರಿಗಳಿಗೆ ಮಾತ್ರ ಇದೆ. ನಿಮಗೆ ನೋಟಿಸ್ ನೀಡಲು ಅಧಿಕಾರ ಕೊಟ್ಟವರು ಯಾರು? ಇದರ ಹಿಂದೆ ಯಾರ ಹುನ್ನಾರವಿದೆ? ಇದರಿಂದ ನೂರಾರು ವರ್ಷಗಳ ಇತಿಹಾಸ ವಿರುವ ಕಾಂಗ್ರೆಸ್ ಪಕ್ಷಕ್ಕೆ ಮಸಿ ಬಳಿಯುವ ಕುತಂತ್ರ ನಡೆಯುತ್ತಿದೆ ಇದಕ್ಕೆ ಬೆದರುವ ಪ್ರಶ್ನೆಯೇ ಇಲ್ಲ ಎಂದು ದೂರಿದರು.

ಪ್ರಾಮಾಣಿಕರಾಗಿದ್ದರೆ ಈಗಲೂ ಸರಿಪಡಿಸಿಕೊಳ್ಳಿ ಎಂದು ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಗೆ ಸಲಹೆ ನೀಡಿದರು.
-sanje vani

loading...

No comments