Breaking News

ಪಿಣರಾಯಿ 9 ಕೊಲೆ ಕೇಸಿನ ಸರದಾರ ?


ಕೇರಳ ಮಾಜಿ ಡಿಜಿಪಿ ಆರೋಪ


ಕಾಸರಗೋಡು : “ಒಂದು ಕೊಲೆ ಜವಾಬ್ದಾರಿಯನ್ನು ನಾನು ಹೊತ್ತುಕೊಂಡರೆ, ಉಳಿದ ಒಂಬತ್ತು ರಾಜಕೀಯ ಕೊಲೆಗಳ ಜವಾಬ್ದಾರಿಯನ್ನು ಕೇರಳ ಸೀಎಂ ಹೊತ್ತುಕೊಳ್ಳುತ್ತಾರೆಯೇ ?” ಎಂದು ರಾಜ್ಯದ ಮಾಜಿ ಡಿಜಿಪಿ ಟಿ ಪಿ ಸೇನ್ಕುಮಾರ್ ಪರ ವಕೀಲರು ಸುಪ್ರೀಂ ಕೋರ್ಟಿನಲ್ಲಿ ವಾದಿಸಿದ್ದಾರೆ.

ಪ್ರಸಕ್ತ ಎಲ್ ಡಿ ಎಫ್ ಸರ್ಕಾರ ಅಧಿಕಾರಕ್ಕೆ ಬಂದ ಎರಡೇ ದಿನದಲ್ಲಿ ಸೇನ್ಕುಮಾರ್ ಅವರನ್ನು ಡಿಜಿಪಿ ಹುದ್ದೆಯಿಂದ ತೆಗೆದು ಹಾಕಲಾಗಿತ್ತು. ದಲಿತ ವಿದ್ಯಾರ್ಥಿಯ ಕೊಲೆ ಪ್ರಕರಣ ಮತ್ತು ಪುತ್ತಿಂಗಲ್ ಅಗ್ನಿ ದುರಂತ ಪ್ರಕರಣ ಮುಂದಿಟ್ಟುಕೊಂಡು ರಾಜ್ಯ ಸರ್ಕಾರ ಸೇನ್ಕುಮಾರರನ್ನು ಹುದ್ದೆಯಿಂದ ತೆಗೆದುಹಾಕಿತ್ತು.

“ಅವರನ್ನು ಸಂಪೂರ್ಣ ರಾಜಕೀಯ ಉದ್ದೇಶಗಳಿಗಾಗಿ ಉನ್ನತ ಹುದ್ದೆಯಿಂದ ತೆಗೆದು ಹಾಕಲಾಗಿದೆ” ಎಂದು ಜಸ್ಟಿಸ್ ಮದನ್ ಲೋಕುರ್ ಅವರ ನೇತೃತ್ವದ ನ್ಯಾಯಪೀಠದೆದುರು ಸೇನ್ಕುಮಾರ್ ವಕೀಲರಾದ ದುಷ್ಯಂತ್ ದವೆ ಮತ್ತು ಪ್ರಶಾಂತ್ ಭೂಷಣ್ ವಾದಿಸಿದ್ದಾರೆ.

“ನನ್ನ ಸಾಧನೆ ಪ್ರಶ್ನಾತೀತವಾಗಿತ್ತು. ಪುತ್ತಿಂಗಲ್ ಮತ್ತು ದಲಿತ ಕಾನೂನು ವಿದ್ಯಾರ್ಥಿ ಕೊಲೆ ಪ್ರಕರಣಗಳಿಗೆ ನಾನು ನಾನು ನೇರ ಜವಾಬ್ದಾರನಲ್ಲ. ಈ ಕೇಸಿನಲ್ಲಿ 96 ಪೊಲೀಸ್ ಅಧಿಕಾರಿಗಳನ್ನು ಸರ್ಕಾರ ವರ್ಗಾಯಿಸಿದೆ. ರಾಜ್ಯದಲ್ಲಿ ಒಂಬತ್ತು ರಾಜಕೀಯ ಕೊಲೆಗಳು ನಡೆದಿವೆ. ಇದಕ್ಕೆ ಗೃಹ ಸಚಿವರೂ ಆಗಿರುವ ಸೀಎಂ ಜವಾಬ್ದಾರಿ ಹೊರುತ್ತಾರೆಯೇ ? ಇದನ್ನೆಲ್ಲ ಒಪ್ಪಿಕೊಳ್ಳದ ಹೊರತು ಅವರು (ಸೀಎಂ) ಎಲ್ಲ ಪ್ರಕರಣಗಳ ಜವಾಬ್ದಾರಿ ನಾನು ಹೊರಬೇಕೆಂದು ಹೇಳುವುದಾದರೂ ಯಾಕೆ ?” ಎಂದು ಸೇನ್ಕುಮಾರ್ ಪರ ವಕೀಲ ದವೆ ವಾದ ಮಂಡಿಸಿದ್ದಾರೆ.

“ಇದೊಂದು ಅತ್ಯಂತ ವೈಯಕ್ತಿಕ ಹಿತಾಸಕ್ತಿಯ ಪ್ರಕರಣದಂತೆ ಕಂಡುಬಂರುತ್ತಿದೆ” ಎಂದು ಜಸ್ಟಿಸ್ ಲೋಕುರ್ ಮೌಖಿಕ ಹೇಳಿಕೆ ನೀಡಿದ್ದಲ್ಲದೆ, “ಈ ಕೇಸು ಪರಿಗಣಿಸುವ ಅಗತ್ಯವಿದೆ” ಎಂದಿದ್ದಾರೆ.

ಸೇನ್ಕುಮಾರ್ ವರ್ಗಾವಣೆ ಕಡತದ ಬಗ್ಗೆ ಎಲ್ ಡಿ ಎಫ್ ಸರ್ಕಾರ ಅಧಿಕಾರಕ್ಕೆ ಬರುವುದಕ್ಕಿಂತ ಮುಂಚೆಯೇ ಪ್ರಸ್ತಾವಿಸಲಾಗಿತ್ತು ಎಂದು ರಾಜ್ಯ ಸರ್ಕಾರದ ಪರವಾದಿ ಪಿ ಪಿ ರಾವ್ ನ್ಯಾಯಪೀಠಕ್ಕೆ ತಿಳಿಸಿದ್ದಾರೆ.
k ale

loading...

No comments