ಅಜ್ಮೀರ್ ಸ್ಫೋಟ ಅಸೀಮಾನಂದ ಸೇರಿ 9 ಮಂದಿ ದೋಷಮುಕ್ತ
ಹೊಸದಿಲ್ಲಿ: ಅಜ್ಮೀರ್ ದರ್ಗಾ ಸ್ಪೋಟ ಪ್ರಕರಣದಲ್ಲಿ ಆರೋಪಿಗಳಾಗಿದ್ದ ಅಸೀಮಾನಂದ ಹಾಗೂ ಇತರ 9 ಮಂದಿಯನ್ನು ರಾಷ್ಟ್ರೀಯ ತನಿಖಾ ದಳ (ಎನ್‌ಐಎ)ದ ವಿಶೇಷ ನ್ಯಾಯಾಲಯ ದೋಷಮುಕ್ತಗೊಳಿಸಿದೆ.
ಸ್ವಾಮಿ ಅಸೀಮಾನಂದ ಅವರು ಈ ಸ್ಫೋಟದ ಸಂಚಿನ ರೂವಾರಿ ಎಂದು ಈ ಹಿಂದೆ ಎನ್‌ಐಎ ಆರೋಪಿಸಿತ್ತು. ಪ್ರಕರಣದಲ್ಲಿ ಸುನೀಲ್ ಜೋಶಿ (ಮೃತಪಟ್ಟಿದ್ದಾರೆ), ದೇವೇಂದ್ರ ಗುಪ್ತಾ ಮತ್ತು ಭುವನೇಶ್ ಪಟೇಲ್ ದೋಷಿಗಳೆಂದು ಕೋರ್ಟ್ ಹೇಳಿದೆ.
2007ರ ಅಕ್ಟೋಬರ್ 11ರಂದು ಸಂಜೆ 6.14ರ ಸುಮಾರಿಗೆ ಇಫ್ತಾರ್ ಕೂಟ ನಡೆಯುವ ಹೊತ್ತಿಗೆ ಅಜ್ಮೀರ್‌ನ ದರ್ಗಾ ಶರೀಫ್‌ನಲ್ಲಿ ಶಕ್ತಿಶಾಲಿ ಬಾಂಬ್ ಸ್ಫೋಟಗೊಂಡಿತ್ತು. ಘಟನೆಯಲ್ಲಿ ಮೂವರು ಮೃತಪಟ್ಟು 15 ಮಂದಿ ಗಾಯಗೊಂಡಿದ್ದರು.
loading...
No comments