Breaking News

100 ನಂಬರ್’ಗೆ ಕರೆ ಮಾಡಿ ಅಶ್ಲೀಲವಾಗಿ ಮಾತನಾಡುತ್ತಿದ್ದವನ ಬಂಧನ


ಮಂಡ್ಯ: ಪ್ರತಿದಿನ ಕಂಟ್ರೋಲ್‍ರೂಮ್ ದೂರವಾಣಿ(100) ಕರೆ ಮಾಡಿ ಮಹಿಳಾ ಪೊಲೀಸ್ಸಿಬ್ಬಂದಿಯೊಬ್ಬರ ಜೊತೆ ಅಶ್ಲೀಲವಾಗಿ ಮಾತನಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.  ಮದ್ದೂರು ತಾಲ್ಲೂಕು ಮೂಡ್ಯ ಗ್ರಾಮದ ದೇವರಾಜ್ ಎಂಬುವನು ದಿನಕ್ಕೆ 10-15 ಬಾರಿ ಕಂಟ್ರೋಲ್‍ರೂಮ್‍ಗೆ ಕರೆ ಮಾಡಿ ಅಲ್ಲಿದ್ದ ಮಹಿಳಾ ಸಿಬ್ಬಂದಿ ಜೊತೆ ಅಸಭ್ಯವಾಗಿ ಮಾತನಾಡುತ್ತಿದ್ದ. ಈ ಬಗ್ಗೆ ಮಂಡ್ಯ ಪಶ್ಚಿಮ ಠಾಣೆಯಲ್ಲಿ ದೂರು ದಾಖಲಾಗಿತ್ತು. ನಂತರ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

loading...

No comments