ಪಾದ್ರಿಯಿಂದ ಬಾಲಕಿ ರೇಪ್ ಪ್ರಕರಣದಲ್ಲಿ ಐವರು ಸಿಸ್ಟರ್ಸ್ ಮೇಲೂ ಶಾಮೀಲು ಕೇಸು
ಕಾಸರಗೋಡು : ಕೇರಳದ ಕಣ್ಣೂರು ಜಿಲ್ಲೆಯ ಕ್ಯಾಥೋಲಿಕ್ ಪಾದ್ರಿಯೊಬ್ಬ ಬಾಲಕಿಯೊಬ್ಬಳನ್ನು ಅತ್ಯಾಚಾರ ನಡೆಸಿದ ಪ್ರಕರಣದಲ್ಲಿ ಆಸ್ಪತ್ರೆ ಮತ್ತು ವೃದ್ಧಾಶ್ರಮಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದ ಓರ್ವ ಪ್ಯಾರಿಸ್ ಸಹಾಯಕ ಮತ್ತು ನನ್ನುಗಳೂ ಸೇರಿದಂತೆ ಆರು ಮಂದಿಯನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು ಈ ಪ್ರಕರಣದಲ್ಲಿ ಅವರ ಪಾತ್ರದ ಬಗ್ಗೆ ತನಿಖೆಯನ್ನು ಕೇದ್ರೀಕರಿಸಿದ್ದಾರೆ.
17ರ ಹರೆಯದ ಅಪ್ರಾಪ್ತೆಯೊಬ್ಬಳನ್ನು ಅತ್ಯಾಚಾರ ನಡೆಸಿದ ಆರೋಪದಲ್ಲಿ ಮನಂತವಾಡಿ ಡಯೋಸಿಸ್‍ನ ಕೊಟ್ಟಿಯೂರ್‍ನಲ್ಲಿರುವ ಸೈಂಟ್ ಸೆಬಾಸ್ಟಿಯನ್ ಚರ್ಚ್‍ಪಾದ್ರರಿ ರಾಬಿನ್ ವಡಕ್ಕಂಚೇರಿ (48) ಎಂಬಾತನನ್ನು ಪೊಲೀಸರು ಬಂಧಿಸಿದ್ದರು.
ಕೇರಳ ಬಿಷಪ್ ಕ್ಷಮೆಯಾಚನೆ
ಅಪ್ರಾಪ್ತೆ ಬಾಲಕಿ ಯೊಬ್ಬಳನ್ನು ಅತ್ಯಾಚಾರ ನಡೆಸಿರುವ ಕೊಟ್ಟಿಯೂರು ಪ್ಯಾರಿಸ್ ವಿಕಾರ್ ಫಾ ರಾಬಿನ್ ವಡಕ್ಕಂಚೇರಿ ಕೃತ್ಯವನ್ನು ಖಂಡಿಸಿರುವ ಆರ್ಚ್ ಡಯಾಸೀಸ್‍ನ ಜೋಸ್ ಪೊನ್ನುರೇಡಂ ಅವರು ಅಪ್ರಾಪ್ತೆ ಬಾಲಕಿ ಮನೆಮಂದಿಯಲ್ಲಿ ಕ್ಷಮೆ ಯಾಚನೆ ಮಾಡಿದ್ದಾರೆ.
loading...
No comments