Breaking News

ಮಧುಮೇಹಕ್ಕೆ ರಾಮಬಾಣ ಬೆಂಡೆಕಾಯಿ!



ಮಧುಮೇಹ ಕಾಯಿಲೆ ಒಮ್ಮೆ ಬಂದರೆ ಅದನ್ನು ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಿಲ್ಲ. ಆದರೆ ಈ ಕಾಯಿಲೆಯನ್ನು ನಿಯಂತ್ರಣದಲ್ಲಿಡಬಹುದು. ಮಧುಮೇಹ ಕಾಯಿಲೆ ಇದ್ದರೆ ದೇಹಕ್ಕೆ ಇನ್ಸುಲಿನ್ ಚುಚ್ಚು ಮದ್ದನ್ನು ತೆಗದುಕೊಳ್ಳಬೇಕಾಗುತ್ತದೆ, ಅದಕ್ಕೆ ಪರ್ಯಾಯವಾಗಿ ಬೆಂಡೆಕಾಯಿಯನ್ನು ಬಳಸಿ ಮಧುಮೇಹವನ್ನು ನಿಯಂತ್ರಣದಲ್ಲಿಡಬಹುದು. ಮಧುಮೇಹ ನಿಯಂತ್ರಣಕ್ಕೆ ಬೆಂಡೆಕಾಯಿಯನ್ನು ಹೇಗೆ ಬಳಸಬೇಕೆಂದು ತಿಳಿಯಲು ಮುಂದೆ ಓದಿ.

ಮಧುಮೇಹ ನಿಯಂತ್ರಣಕ್ಕೆ ಬೆಂಡೆಕಾಯಿಯನ್ನು ಬಳಸಬೇಕಾದ ವಿಧಾನ:

 ಒಂದು ಬೆಂಡೆಕಾಯಿಯನ್ನು ತೆಗೆದುಕೊಂಡು ಅದರ ಎರಡೂ ತುದಿಗಳನ್ನು ಚಾಕುವಿನಿಂದ ಕತ್ತರಿಸಬೇಕು.
 ಅಗ ಅದರಿಂದ ಬಿಳಿ ದ್ರಾವಣ ಬರಲಾರಂಭಿಸುತ್ತದೆ, ಅದನ್ನು ಒರೆಸಬೇಡಿ. ಆ ಬೆಂಡೆಕಾಯಿಯನ್ನು ನೀರಿರುವ ಲೋಟಕ್ಕೆ ಹಾಕಿ ಅದನ್ನು ಮುಚ್ಚಿಟ್ಟು ಮಲಗಿ.
 ಬೆಳಗ್ಗೆ ಆ ಬೆಂಡೆಕಾಯಿ ತುಂಡನ್ನು ನೀರಿನಿಂದ ತೆಗೆಯಬೇಕು. ನಂತರ ಆ ನೀರನ್ನು ಕುಡಿಯಬೇಕು. ಈ ರೀತಿ ಪ್ರತಿದಿನ ಮಾಡಿದರೆ ಮಧುಮೇಹವನ್ನು ನಿಯಂತ್ರಣದಲ್ಲಿಡಬಹುದು.

ಸೂಚನೆ: ಬೇಯಿಸಿದ ಬೆಂಡೆಕಾಯಿಕ್ಕಿಂತ ಹಸಿಬೆಂಡೆಕಾಯಿ ಮಧುಮೇಹ ನಿಯಂತ್ರಣಕ್ಕೆ ಒಳ್ಳೆಯದು.
ಮಧುಮೇಹಿಗಳು ಬೆಂಡೆಕಾಯಿ ತಿನ್ನುವುದರಿಂದ ಈ ಕೆಳಗಿನ ಪ್ರಮುಖ ಪ್ರಯೋಜನಗಳನ್ನು ಪಡೆಯಬಹುದು:
ಕಡಿಮೆ GI ಪ್ರಮಾಣ: ಮಧುಮೇಹಿಗಳಿಗೆ ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ (GI) ಇರುವ ಆಹಾರಗಳನ್ನು ತಿನ್ನಲು ವೈದ್ಯರು ಸಲಹೆ ಮಾಡುತ್ತಾರೆ. ಬೆಂಡೆಕಾಯಿಯಲ್ಲಿ ಕಡಿಮೆ ಪ್ರಮಾಣದ GI ಇರುವುದರಿಂದ ದೇಹದಲ್ಲಿ ಸಕ್ಕರೆಯಂಶ ಹೆಚ್ಚಾಗದಂತೆ ನೋಡಿಕೊಳ್ಳುತ್ತದೆ.
ಕಿಡ್ನಿಗೆ ಒಳ್ಳೆಯದು: ಬೆಂಡೆಕಾಯಿ ಮಧುಮೇಹ ಕಾಯಿಲೆಗೆ ಮಾತ್ರವಲ್ಲ ಕಿಡ್ನಿ ಆರೋಗ್ಯಕ್ಕೂ ತುಂಬಾನೇ ಒಳ್ಳೆಯದು.
ನಾರಿನಂಶ: ಇದು ತಿನ್ನಬಹುದಾದ ನಾರಿನಂಶವಿರುವ ಪದಾರ್ಥವಾಗಿರುವುದರಿಂದ ಇದನ್ನು ತಿಂದಾಗ ಜೀರ್ಣಕ್ರಿಯೆ ಸ್ವಲ್ಪ ನಿಧಾನವಾಗಿ ಆಗುವುದರಿಂದ ದೇಹದಲ್ಲಿ ಸಕ್ಕರೆಯಂಶವನ್ನು ನಿಯಂತ್ರಣದಲ್ಲಿಡುವಲ್ಲಿ ಸಹಕಾರಿಯಾಗಿದೆ.
loading...

No comments